ಮುಸ್ಲಿಂ ಹಕ್ಕುಗಳ ಪರವಾಗಿ ರಾಜ್ಯ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂದಕ್ಕೆ ನೀಡುತ್ತೇನೆ: ಅನ್ವರ್ ಮಾಣಿಪ್ಪಾಡಿ

Prasthutha|

►► ಬಪ್ಪನಾಡಿನಲ್ಲಿ ಎಲ್ಲರೂ ಜೊತೆಯಾಗಿದ್ದರು, ಆದರೆ ವ್ಯಾಪಾರಸ್ಥರ ಒಗ್ಗಟ್ಟು ಒಡೆದು ಹಾಕಿದರು !

- Advertisement -

►► ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನ ವಹಿಸಲು ಬಿ ವೈ ವಿಜಯೇಂದ್ರ ಡೀಲಿಂಗ್ ಗೆ ಬಂದಿದ್ದರು

- Advertisement -

ಮಂಗಳೂರು: ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮೈನಾರಿಟಿ ಕಮಿಷನ್ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ರಾಜ್ಯ ಸರಕಾರವು ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಹಕ್ಕುಗಳ ಪರವಾಗಿ ರಾಜ್ಯ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂದಕ್ಕೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.

ವ್ಯಾಪಾರ ನಿರ್ಬಂಧ ಇನ್ನಿತರ ಧರ್ಮ ದಂಗಲ್ ಹೆಸರಲ್ಲಿ ಮುಸ್ಲಿಮರ ಬಗ್ಗೆ ರಾಜ್ಯ ಸರಕಾರ ತಾರತಮ್ಯ ಮಾಡುತ್ತಿದೆ. ವಕ್ಫ್ ಆಸ್ತಿ ಬಗ್ಗೆ ವರದಿ ನೀಡಿರುವುದನ್ನು ನಿರ್ಲಕ್ಷಿಸಿ ಮುಸ್ಲಿಮರನ್ನು ಅವಮಾನಿಸಿದೆ ಎಂದಿದ್ದಾರೆ. ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದು ರಾಜ್ಯದಲ್ಲಿ ಅನುಷ್ಠಾನ ಆಗುತ್ತಿಲ್ಲ ಎಂದ ಅವರು, ಸಂವಿಧಾನದಡಿ ಮುಸ್ಲಿಮರ ಹಕ್ಕುಗಳನ್ನು ಉಲ್ಲಂಘಿಸಿ, ಅಗೌರವ ನೀಡುತ್ತಿರುವುದು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಹಕ್ಕುಗಳ ಪರವಾಗಿ ರಾಜ್ಯ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂದಕ್ಕೆ ನೀಡುತ್ತೇನೆ. ನನಗೆ ನೀಡಿರುವ ಗನ್ ಮ್ಯಾನ್, ಮೈನಾರಿಟಿ ಕಮಿಷನ್ ಮಾಜಿ ಅಧ್ಯಕ್ಷನ ಸವಲತ್ತನ್ನೂ ಹಿಂದಕ್ಕೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನ ವಹಿಸಲು ಬಿ ವೈ ವಿಜಯೇಂದ್ರ ಡೀಲಿಂಗ್ ಗೆ ಬಂದು ನಿಮಗೆಷ್ಟು ಕೋಟಿ ಬೇಕು ಎಂದು ಕೇಳಿ ಎಂದಿದ್ದರು ಎಂದ ಅನ್ವರ್ ಮಾಣಿಪ್ಪಾಡಿ ಆದರೆ ನಾನು ಭ್ರಷ್ಟಾಚಾರಕ್ಕೆ ತಲೆಬಾಗಿಲ್ಲ ಎಂದು ಹೇಳಿದ್ದಾರೆ.

ನಾನು ಅಲ್ಪಸಂಖ್ಯಾತರ ಪರ ನಿಂತು ವರದಿ ಜಾರಿಗೆ ಆಗ್ರಹಿಸುತ್ತೇನೆ. ನನ್ನ ವರದಿ ತಪ್ಪಾಗಿದ್ದಲ್ಲಿ ನನ್ನ ತಲೆ ಕಡಿಯಿರಿ ಎಂದ ಅವರು, ಹೈಕೋರ್ಟ್ ಹೇಳಿದರೂ ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ಸರಕಾರ ವರದಿ ಜಾರಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ನಾನು ಜೀವ ಇರೋವರೆಗೂ ಸತ್ಯ ಹೇಳುತ್ತೇನೆ, ಪಕ್ಷದಿಂದ ಹೊರಗೆ ಹಾಕಿದರೆ ಹಾಕಲಿ ಪಕ್ಷದಲ್ಲಿದ್ದುಕೊಂಡೇ ಅನ್ಯಾಯ ಪ್ರಶ್ನಿಸುತ್ತೇನೆ, ಅಲ್ಪಸಂಖ್ಯಾತರ ಪರ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

ಜನರನ್ನು ದಿಕ್ಕು ತಪ್ಪಿಸಿ ಕೋಮು ಗಲಭೆ ಎಬ್ಬಿಸಲು ಕಾರಣರಾಗಬೇಡಿ, ಬಪ್ಪನಾಡಿನಲ್ಲಿ ಎಲ್ಲರೂ ಜೊತೆಯಾಗಿದ್ದರು, ವ್ಯಾಪಾರಸ್ಥರ ಒಗ್ಗಟ್ಟನ್ನು ಒಡೆದು ಹಾಕಿದರು. ಮಾಜಿ ಸಿಎಂ ಯಡಿಯೂರಪ್ಪ, ಈಗಿನ ಸಿಎಂ ಬೊಮ್ಮಾಯಿ ಕೂಡ ಅಲ್ಪಸಂಖ್ಯಾತ ವಿರೋಧಿ ಎಂದು ಅನ್ವರ್ ಮಾಣಿಪ್ಪಾಡಿ ವಾಗ್ದಾಳಿ ನಡೆಸಿದರು.

Join Whatsapp