ನಾನೇ ಮುಂದಿನ ಮುಖ್ಯಮಂತ್ರಿ: ಬಸನಗೌಡ ಪಾಟೀಲ ಯತ್ನಾಳ್‌

Prasthutha|

ಕೊಪ್ಪಳ: ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಹಣೆ ಬರಹದಲ್ಲಿದ್ದರೆ ಆಗೇ ಆಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡಿ ಎಂದು ನಾನು ಯಾವ ನಾಯಕರ ಮನೆಗೂ ಹೋಗಿಲ್ಲ ಎಂದರು.

ಡಾ. ಬಾಬ ಸಾಹೇಬ್ ಅಂಬೇಡ್ಕರ್ ಈ ದೇಶದ ಮೊದಲ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಪ್ರತ್ಯೇಕವಾಗುತ್ತಿರಲಿಲ್ಲ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ದಲಿತರು ಭಾರತಕ್ಕೆ ಬನ್ನಿ ಎಂದು ಅಂಬೇಡ್ಕರ್ ಕರೆ ನೀಡಿದ್ದರು. ಆದರೆ ಜವಾಹರ ಲಾಲ್​ ನೆಹರು ತಾವು ಪ್ರಧಾನಿಯಾಬೇಕೆಂಬ ಕಾರಣಕ್ಕೆ ದೇಶ ವಿಭಜನೆ ಮಾಡಿದರು.



Join Whatsapp