ಜೆಡಿಎಸ್ ಅಧಿಕಾರ ಹಿಡಿಯದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ: ಸಿಎಂ ಇಬ್ರಾಹೀಂ ಸವಾಲು

Prasthutha|

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಧಿಕಾರಕ್ಕೆ ಬಂದೇ ಬರುತ್ತದೆ. ಒಂದು ವೇಳೆ ಬಾರದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸಿಎಂ ಇಬ್ರಾಹೀಂ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹೀಂ, ಇದೇ ಚಾಲೆಂಜನ್ನುಹಾಕಲು ಕಾಂಗ್ರೆಸ್ಸಿಗರಿಗೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

- Advertisement -

ಕಾಂಗ್ರ್ರೆಸ್ ಪಕ್ಷವು ಪರಿಷತ್ ನಲ್ಲಿ ಹೆಚ್ಚು ಸ್ಥಾನ ಇದ್ದರೂ ಮುಸ್ಲಿಮರಿಗೆ ಯಾಕೆ ವಿಪಕ್ಷ ಸ್ಥಾನವನ್ನು ನೀಡಿಲ್ಲ, ಕಾಂಗ್ರೆಸ್ ನಾಯಕರೇ ಎರಡನೇ ಅಭ್ಯರ್ಥಿ ಯಾಕೆ ಹಾಕಿದ್ದೀರಿ ಎಂದು ಬಂದು ಪ್ರಮಾಣ ಮಾಡಿ ಎಂದು ಸವಾಲೆಸೆದರು. ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಆರೋಪಿಸಿದ್ದಾರೆ.

ಎರಡು ಪಕ್ಷಗಳಿಗಿಂತ ಹೆಚ್ಚು ಸ್ಥಾನವನ್ನು ಜೆಡಿಎಸ್ ಪಡೆಯಲಿದೆ. ಇಲ್ಲದೆ ಹೋದರೆ ನಾನು ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಜೆಡಿಎಸ್ 2023 ಕ್ಕೆ ಬರೊಲ್ಲ ಅಂತ ಕಾಂಗ್ರೆಸ್ ಅವರು ಚಾಲೆಂಜ್ ತೆಗೆಯಲು ತಯಾರಿದ್ದಾರಾ ಎಂದು ಸವಾಲೆಸೆದರು. ಇದೇ ಸಂದರ್ಭದಲ್ಲಿ ಇಬ್ರಾಹಿಂ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಜೊತೆ ಸಿದ್ದರಾಮಯ್ಯರೇ ಡೀಲ್ ಮಾಡಿಕೊಂಡಿದ್ದಾರೆ. ಲೆಹರ್ ಸಿಂಗ್ ಬಿಜೆಪಿ ಅಭ್ಯರ್ಥಿ ಅಲ್ಲ, ಯಡಿಯೂರಪ್ಪ ಅಭ್ಯರ್ಥಿ ಎಂದು ವ್ಯಂಗ್ಯವಾಡಿದರು



Join Whatsapp