ನನ್ನನ್ನು ಭಾರತದಿಂದ ಹೊರಹೋಗುವಂತೆ ಹೇಳಿಲ್ಲ: ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್ ಸ್ಪಷ್ಟನೆ

Prasthutha|

ನವದೆಹಲಿ: 2023ರ ವಿಶ್ವಕಪ್ ನ ಐಸಿಸಿ ಡಿಜಿಟಲ್ ತಂಡದ ಭಾಗವಾಗಿದ್ದ ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್ ಅವರನ್ನು ಇದರಿಂದ ಹೊರ ಹಾಕಲಾಗಿದೆ ಎಂದು ಹೇಳಲಾಗಿತ್ತು.

- Advertisement -


ಇದೀಗ ಝೈನಾಬ್ ಅಬ್ಬಾಸ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ನಾನು ಕ್ರಿಕೆಟ್ ಲೋಕವನ್ನು ತುಂಬಾ ಇಷ್ಟಪಡುತ್ತೇನೆ, ಕ್ರಿಕೆಟ್ ಕ್ಷೇತ್ರ ನನಗೆ ತುಂಬಾ ಅವಕಾಶವನ್ನು ನೀಡಿದೆ. ಇನ್ನು ಮುಂದಕ್ಕೂ ನಾನು ಇದರಲ್ಲಿಯೇ ಮುಂದುವರಿಯುವೆ. ಅದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ ಮತ್ತು ಈ ಕಾರಣಕ್ಕೆ ಕೃತಜ್ಞತೆಯನ್ನು ಹೊಂದಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಇನ್ನು ನನ್ನನ್ನು ಭಾರತದಿಂದ ಹೊರಹೋಗುವಂತೆ ಹೇಳಿಲ್ಲ ಎಂದು ಝೈನಾಬ್ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ.

ಝೈನಾಬ್ ಅಬ್ಬಾಸ್ ಅವರು ಹೈದರಾಬಾದ್‌ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ಮೂರು ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸಿದರು. ಆದರೆ ಭಾರತದ ವಿರೋಧ ಪೋಸ್ಟ್ ​ಗಳನ್ನು ಹಾಕಿದ್ದರು ಎಂದು ಅವರನ್ನು ಭಾರತದಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಹರಡಿತ್ತು. 

- Advertisement -

Join Whatsapp