ಶಿರಸಿ: ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರು ಹಾಗೂ ಇವರ ಉದ್ಯಮದ ಇಬ್ಬರು ಜತೆಗಾರರ ನಿವಾಸದ ಮೇಲೆ ಶುಕ್ರವಾರ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಮೂರು ಕಾರುಗಳಲ್ಲಿ ಬಂದ ಆದಾಯ ತೆರಿಗೆ ಅಧಿಕಾರಿಗಳ ತಂಡ ದೀಪಕ್ ಅವರ ನಗರದ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದು, ಸುಮಾರು 10 ಜನ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ದೀಪಕ ಹೆಗಡೆ ಮನೆಯಲ್ಲಿ ಅವರ ಜತೆಗೆ ಅಡಿಕೆ, ರಿಯಲ್ ಎಸ್ಟೇಟ್ ಉದ್ಯಮದ ಪಾರ್ಟನರ್ ಶಿವರಾಮ ಹೆಗಡೆ ಅವರನ್ನೂ ಸಹ ಕರೆ ತಂದು ವಿಚಾರಣೆ ನಡೆಸಲಾಗುತ್ತಿದೆ.