ಗಾಯತ್ರಿ ಶಾಂತೇಗೌಡ ಮನೆಯಲ್ಲಿ ಸತತ 2ನೇ ದಿನವೂ ಐಟಿ ದಾಳಿ

Prasthutha|

ಚಿಕ್ಕಮಗಳೂರು: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎರಡನೇ ದಿನವೂ ಶೋಧ ಮುಂದುವರಿಸಿದ್ದಾರೆ.

- Advertisement -


ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ಗಾಯತ್ರಿ ಶಾಂತೇಗೌಡ ಅವರ ಮನೆಗೆ ಮುಂಜಾನೆ 10ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಅಧಿಕಾರಿಗಳು ಬಂದಿರುವ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಮದುವೆ ಬೋರ್ಡ್ ಇದೆ. ಯಾರಿಗೂ ಅನುಮಾನ ಬಾರದಿರಲೆಂದು ಅಭಿನವ್ ವೆಡ್ಸ್ ದೀಪಿಕಾ ಎಂಬ ಪೋಸ್ಟರ್ ಅಂಟಿಸಿಕೊಂಡಿರುವ ವಾಹನಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದರು.


ಸತತ ಎರಡು ದಿನಗಳಿಂದ ತನ್ನ ನಿವಾಸದಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರೂ ಗಾಯತ್ರಿ ಶಾಂತೇಗೌಡ ಅವರು ಮನೆಗೆ ಆಗಮಿಸಿಲ್ಲ ಎಂದು ತಿಳಿದು ಬಂದಿದೆ.

Join Whatsapp