ಐಫೋನ್‌’ಗೆ ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌’ನ ಕತ್ತು ಕೊಯ್ದು ಕೊಲೆ

Prasthutha|

- Advertisement -

ಹಾಸನ: ಬುಕ್ ಮಾಡಿದ್ದ ಐಫೋನ್‌ ಗೆ ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌ ನ ಕತ್ತು ಕೊಯ್ದು ಕೊಲೆ ಮಾಡಿ ಮನೆಯಲ್ಲಿಯೇ ಮೃತದೇಹವನ್ನು ನಾಲ್ಕು ದಿನ ಇಟ್ಟುಕೊಂಡಿದ್ದ ಘಟನೆ ಅರಸೀಕೆರೆ ಪಟ್ಟಣದ ಅಂಚೆಕೊಪ್ಪಲಿದಲ್ಲಿ ನಡೆದಿದೆ.

ಕಳೆದ ಫೆಬ್ರವರಿ 11 ರಂದು ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ‍್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅರಸೀಕೆರೆ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಕೊಲೆ ಆರೋಪಿ ಹೇಮಂತ್ ದತ್ತ (20) ಸಿಕ್ಕಿಬಿದ್ದಿದ್ದು, ಹೇಮಂತ್ ನಾಯ್ಕ (23) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

ಆರೋಪಿ ಹೇಮಂತ್ ದತ್ತ ಕೊಲೆ ಮಾಡಿ ಮೃತದೇಹವನ್ನು ನಾಲ್ಕು ದಿನ ಮನೆಯಲ್ಲೇ ಇಟ್ಟುಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಮೃತ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ ಪ್ರೆಸ್‌ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಆರೋಪಿ ಹೇಮಂತ್ ದತ್ತ ಇತ್ತೀಚೆಗೆ ಫ್ಲಿಪ್‌ ಕಾರ್ಟ್‌ ನಲ್ಲಿ 46 ಸಾವಿರ ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದರಿಂದ ಹೇಮಂತ್ ನಾಯ್ಕ ಫೆಬ್ರವರಿ 7ರಂದು ಅರಸೀಕೆರೆ ಪಟ್ಟಣದ, ಲಕ್ಷ್ಮೀಪುರ ಬಡಾವಣೆಯಲ್ಲಿರುವ ಹೇಮಂತ್ ದತ್ತ ಮನೆಗೆ ಐಫೋನ್ ಡೆಲಿವರಿ ಕೊಡಲು ಬಂದಿದ್ದ.
ಅಲ್ಲಿಗೆ ಬಂದೊಡನೆ ಹೇಮಂತ್ ದತ್ತ ಐಫೋನ್ ಬಾಕ್ಸ್‌ ಅನ್ನು ಪನ್ ಮಾಡುವಂತೆ ಹೇಳಿದ್ದ. ಅದಕ್ಕೆ ನಾಯ್ಕ ಓಪನ್ ಮಾಡಲು ಆಗಲ್ಲ. ಮಾಡಿದರೆ, ಹಿಂದಿರುಗಿಸಿಲು ಸಾಧ್ಯವಿಲ್ಲ, 46 ಸಾವಿರ ಹಣ ಕೊಡಿ ಎಂದು ಕೇಳಿದ್ದ.
ನಂತರ ಹೇಮಂತ್ ದತ್ತ ಇಲ್ಲೇ ಕುಳಿತುಕೊ ಹಣ ಕೊಡುತ್ತೇನೆ ಎಂದು ಹೇಳಿ ಹೋಗಿದ್ದ. ಬಳಿಕ ಕೊಡಲು ಹಣವಿಲ್ಲದೇ ಮನೆಯೊಳಗೆ ಕುಳಿತು ಮೊಬೈಲ್ ನೋಡುತ್ತಿದ್ದ ಹೇಮಂತ್ ನಾಯ್ಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.

ನಾಲ್ಕು ದಿನಗಳಾದರೂ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡು ವಾಸನೆ ಬರುತ್ತಿದ್ದರಿಂದ ಫೆ.11 ರಂದು ಗೋಣಿಚೀಲದಲ್ಲಿ ಹೆಣ ತುಂಬಿ ಬೈಕ್‌ ನಲ್ಲಿ ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಮೃತದೇಹ ಸುಟ್ಟು ಹಾಕಿದ್ದ. ಈ ಸಂಬಂಧ ಅರಸೀಕೆರೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದೇ ವೇಳೆ ಫೆ.7 ರಂದು ಕೆಲಸಕ್ಕೆ ಹೋಗಿದ್ದ ತಮ್ಮ ಮನೆ ಬಾರದ ಹಿನ್ನೆಲೆಯಲ್ಲಿ ಫೆ.8 ರಂದು ಹೇಮಂತ್ ನಾಯ್ಕ ಅಣ್ಣ ಮಂಜ ನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣ ಭೇದಿಸಿ, ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ.

ಆರೋಪಿ ಹೇಮಂತ್ ದತ್ತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ ಗೆ ಕೊಡಲು ಹಣವಿಲ್ಲದೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.



Join Whatsapp