ನಾನು ಸಿಬಿಐ ತನಿಖೆ ನೋಡಿದ್ದೇನೆ; ಇನ್ನು ಶ್ರೀರಾಮುಲು, ಬೆಂಗಲಿಗರ ದೂರಿಗೆ ಹೆದರುತ್ತೇನಾ?: ಜನಾರ್ದನ ರೆಡ್ಡಿ

Prasthutha|

ಬಳ್ಳಾರಿ: ಪ್ರಾಣ ಸ್ನೇಹಿತರು ಎಂದೇ ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವಿನ ಮುಸುಕಿನ ಗುದ್ದಾಟ ಕೊನೆಗೂ ಸ್ಫೋಟಗೊಂಡಿದೆ. ಶ್ರೀರಾಮುಲು ಹೇಳಿಕೆಗೆ ಇದೀಗ ಜನಾರ್ದನರೆಡ್ಡಿ ತಿರುಗೇಟು ನೀಡಿದ್ದಾರೆ.

- Advertisement -

ಶ್ರೀರಾಮುಲು ಬೆಂಬಲಿಗರು ದೂರು ನೀಡಿರುವ ವಿಚಾರವಾಗಿ ಇಂದು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನರೆಡ್ಡಿ, ‘ನಾನು ಸಿಬಿಐ ಪ್ರಕರಣವನ್ನು ನೋಡಿದ್ದೇನೆ ಇನ್ನು ಶ್ರೀರಾಮುಲು ಬೆಂಬಲಿಗರು ನನ್ನ ವಿರುದ್ಧ ನೀಡಿರುವ ದೂರು ಯಾವ ಲೆಕ್ಕ.ನಾನು ಯಾವುದೋ ದೂರಿಗೆ ಜಗ್ಗುವವನಲ್ಲ, ಹೆದರಲ್ಲ ಎನ್ನುವ ಮೂಲಕ ಶ್ರೀರಾಮುಲು ಬೆಂಬಲಿಗರಿಗೂ ತಿರುಗೇಟು ನೀಡಿದ್ದಾರೆ.

ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿಯವರು, ಯಾವುದೂ ರಹಸ್ಯವಾಗಿ ಉಳಿಯೊಲ್ಲ, ನಿಧಾನವಾಗಿ ಕಾಲಕ್ರಮೇಣ ಒಂದೊಂದಾಗಿ ರಹಸ್ಯ ಬಯಲಿಗೆ ಬರಲಿವೆ. ಶ್ರೀರಾಮುಲು ಆರೋಪಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಏನೇ ಇದ್ರೂ ಪಕ್ಷದ ವೇದಿಕೆಯಲ್ಲಿ ಮಾತಾಡ್ತೇನೆ. ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದಾರೆ, ಅಲ್ಲೇ ಮಾತಾಡ್ತೇನೆ. ನಾನು ಬಳ್ಳಾರಿಯಲ್ಲೇ ಇರುತ್ತೇನೆ. ಸಮಯ ಬಂದಾಗ ಎಲ್ಲವೂ ಗೊತ್ತಾಗುತ್ತದೆ. ಇನ್ಮೇಲೆ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.



Join Whatsapp