ಸೋನಾಕ್ಷಿ ಮದುವೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ: ಶತ್ರುಘ್ನ ಸಿನ್ಹಾ

Prasthutha|

ನವದೆಹಲಿ: ಬಾಲಿವುಡ್ ನಟಿ, ಸೋನಾಕ್ಷಿ ಸಿನ್ಹಾ ಜೂನ್ 23ರಂದು ಮುಂಬೈನಲ್ಲಿ ಝಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಭಾರೀ ಸುದ್ದಿಯಾಗಿದೆ. ಆದರೆ ಈವರೆಗೂ ಸೋನಾಕ್ಷಿ ಮತ್ತು ಇಕ್ಬಾಲ್ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಹೀಗಿರುವಾಗಲೇ ಸೋನಾಕ್ಷಿ ತಂದೆ, ಬಾಲಿವುಡ್ ನಟ ಹಾಗೂ ಸಂಸದ ಶತ್ರುಘ್ನ ಹೇಳಿಕೆ ಹೊರಬಿದ್ದಿದೆ.

- Advertisement -

ಮಗಳು ಸೋನಾಕ್ಷಿ ಸಿನ್ಹಾ ಮದುವೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವಳ ಮದುವೆಯ ಬಗ್ಗೆ ನನಗೆ ಗೊತ್ತಿರುವುದು ಮಾಧ್ಯಮಗಳಿಂದ ಕೇಳಿದಷ್ಟು ಮಾತ್ರ. ನಾನು ಇದೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ತಮ್ಮ ಮಗಳ ಮದುವೆ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಶತ್ರುಘ್ನ ಸಿನ್ಹಾ, ಮಾಧ್ಯಮಗಳಿಗೆ ಎಲ್ಲವೂ ತಿಳಿದಿದೆ. ನಿಮಗೆ ಗೊತ್ತಿಲ್ಲದಿದ್ದರೆ ಹೇಗೆ ಎಂದು ಅನೇಕ ಆಪ್ತರು ನನ್ನನ್ನು ಕೇಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ನಾನು ಏನು ಹೇಳಬಲ್ಲೆ ಎಂದರೆ, ಇಂದಿನ ಮಕ್ಕಳು ಹೆತ್ತವರನ್ನು ಕೇಳುವುದಿಲ್ಲ. ಅವರು ಕೇವಲ ಪಾಲಕರಿಗೆ ತಿಳಿಸುತ್ತಾರೆ. ನಾವೂ ಸಹ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

- Advertisement -

ಮಗಳ ನಿರ್ಧಾರದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದೇ ಇದೇ ಸಂದರ್ಭ ಅವರು ಹೇಳಿದ್ದಾರೆ. ಸೋನಾಕ್ಷಿ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಅವಳು ಎಂದಿಗೂ ಕಾನೂನು ಬಾಹಿರ ಅಥವಾ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕನ್ನು ಅವಳು ಹೊಂದಿದ್ದಾಳೆ ಎಂದೂ ಅವರು ಹೇಳಿದ್ದಾರೆ.

Join Whatsapp