‘ಮೋದಿ ಭಕ್ತ’ ಎಂದು ಹೇಳಿಕೊಳ್ಳಲು ನನಗೆ ಯಾವುದೇ ಸಂಕೋಚವಿಲ್ಲ: ನಟ ಅನಂತ್ ನಾಗ್

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಗಳಿಗೆ ನಾನು ಮನಸೋತಿದ್ದೇನೆ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ ಎಂದು ನಟ ಅನಂತ್ ನಾಗ್ ಬಹಿರಂಗವಾಗಿ ಘೋಷಿಸಿದ್ದಾರೆ.

- Advertisement -


ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಷ್ಟ್ರದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ” ಅನ್ನೋ ವಿಚಾರದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಾಗ ನಾನು ಯೋಚಿಸಿದೆ. ಇದ್ಯಾವುದು ಮೋದಿ ತಂದಿರುವ ಹೊಸ ಕಾರ್ಯಕ್ರಮವಾ ಎಂದು ಯೋಚನೆಗೆ ಬಿದ್ದೆ. ಪತ್ರಿಕೆಗಳು ಹೀಗೆ ನಡೆಯಬೇಕು ಎಂದು ಸರ್ಕಾರಗಳು ತೀರ್ಮಾನ ಮಾಡಬೇಕಾ..? ಹೊಸ ಹೊಸ ಪೀಳಿಗೆಯ ಮಾಧ್ಯಮಗಳು ಹೇಗಿರಬೇಕು ಎಂದು ಅವರೇ ಚಿಂತಿಸಬೇಕು’ ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವೇ ನಮಗೆ ಸ್ಫೂರ್ತಿ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ ಎಂದು ಹೇಳಿದರು.

- Advertisement -


ಬಿಜೆಪಿ ಪರವಾಗಿ ಈಗಾಗಲೇ ಅನಂತ್ ನಾಗ್ ಸಾಕಷ್ಟು ಮಾತುಗಳನ್ನು ಆಡಿದ್ದಾರೆ. ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಾವು ಮೋದಿ ಭಕ್ತ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.



Join Whatsapp