ನನಗೆ ಅಪರಿಚಿತರಿಂದ ಬೆದರಿಕೆಯಿದೆ: ಹಿಂದೂ ಮಹಾ ಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್

Prasthutha|

ಮಂಗಳೂರು: ಅಪರಿಚಿತ ವ್ಯಕ್ತಿಗಳು ಮನೆಗೆ ಬಂದು ನನ್ನ ಮಾಜಿ ಕಾರು ಚಾಲಕನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದರೂ ನನಗೆ ಭದ್ರತೆ ಒದಗಿಸಿಲ್ಲ ಎಂದು ಅಖಿಲ ಹಿಂದೂ ಮಹಾ ಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆವು. ಆದರೆ ಆ ನಿಟ್ಟಿನಲ್ಲಿ ಸರಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಮನೆಗೆ ಕೆಲವು ಅಪರಿಚಿತ ಹಿಂದೂಗಳು ಬಂದು ನನ್ನನ್ನು ನನ್ನ ಮಾಜಿ ಕಾರು ಚಾಲಕ ಕಿರಣ್ ಕುಮಾರ್ ಅವರೊಂದಿಗೆ ವಿಚಾರಿಸಿದ್ದಾರೆ. ಬಂದವರು ಸಿಬಿಐ ತನಿಖಾಧಿಕಾರಿ ಎಂದು ಹೇಳಿದ್ದಾರೆ. ನಾವು ಈ ಬಗ್ಗೆ ದೂರು ನೀಡಿದ್ದೇವೆ. ಹಿಂದೂಗಳ ವಿರುದ್ಧ ಹಿಂದೂ ಬಿಜೆಪಿ ಸರಕಾರವೇ ಕೆಲಸ ಮಾಡುವುದು ವಿಷಾದನೀಯ ಎಂದು ಪವಿತ್ರನ್ ಹೇಳಿದರು.

- Advertisement -

ಬಂದವರು ಮಾಜಿ ಚಾಲಕನಿಗೆ ಪಿಸ್ತೂಲು ತೋರಿಸಿ ಯಾರಿಗೂ ಹೇಳದಂತೆ ತಾಕೀತು ಮಾಡಿ ಹೋಗಿದ್ದಾರೆ. ನಾವು ಗನ್ ಮ್ಯಾನ್ ರಕ್ಷಣೆ ಕೇಳಿದ್ದೇವೆ. ಆದರೆ ಅವರು ಕೊಡುವ ನಂಬಿಕೆ ಇಲ್ಲ ಎಂದೂ ಪವಿತ್ರನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಭಾಹಿಂಮ ಸಭಾದ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ, ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp