ಮೋದಿ ಪ್ರಧಾನಿ ಆದ ಕಾರಣ ನನಗೆ ಪದ್ಮಭೂಷಣ ದೊರಕಿದೆ: ಎಸ್.ಎಲ್. ಭೈರಪ್ಪ

Prasthutha|

ಮೈಸೂರು: ನರೇಂದ್ರ ಮೋದಿ ಪ್ರಧಾನಿ ಆದ ಕಾರಣ ನನಗೆ ಪದ್ಮಭೂಷಣ ಪ್ರಶಸ್ತಿ ದೊರಕಿದೆ.ಇಲ್ಲದೆ ಇದ್ದರೆ ಪ್ರಶಸ್ತಿ ಬರುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದ್ದಾರೆ.

- Advertisement -


ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯದ ಉತ್ಸವ ಬಹಳ ಮಹತ್ತರವಾದದ್ದು. ಗಣರಾಜ್ಯ ಮೊದಲಿಂದಲ್ಲೂ ಇತ್ತು. ಎಷ್ಟೋ ದೇಶದವರು ಸ್ವಾತಂತ್ರ್ಯ ಪಡೆದಿದ್ದಾರೆ. ಆದರೆ ಅಲ್ಲಿ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ನಮ್ಮಲ್ಲಿ ಸಂವಿಧಾನ ಇದೆ. ಅದರ ಬಹುಭಾಗ ನಮ್ಮಲ್ಲಿ ಮೊದಲಿದಂಲೂ ಇದ್ದುದರಿಂದ ಅದು ಈ ದೇಶವನ್ನು ಕಾಪಾಡುತ್ತದೆ ಎಂದರು.


ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ಈ ಸಂಸ್ಕೃತಿ ಏಕ ರೂಪದಲ್ಲಿ ಬೆಳೆದಿದೆ. ಅವುಗಳನ್ನೆಲ್ಲಾ ಇಲ್ಲೇ ಕೂತು ಬರೆದಿದ್ದೇನೆ. ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನ ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತವಾಗಿರುತ್ತಾನೆ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದು ತಿಳಿಸಿದರು.

- Advertisement -


2023ನೇ ಸಾಲಿನ ಪದ್ಮಶ್ರೀ , ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಈ ಬಾರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಒಬ್ಬರಿಗೆ ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ, 5 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.



Join Whatsapp