ಪಕ್ಷದ ಅಂತಿಮ ಧ್ವನಿ ಎಂದು ನಾನು ಭಾವಿಸುವುದಿಲ್ಲ: ಬಿಜೆಪಿಯ ಛೀಮಾರಿಗೆ ಕಂಗನಾ ಪ್ರತಿಕ್ರಿಯೆ

Prasthutha|

ದೆಹಲಿ: ಬಿಜೆಪಿ ಸಂಸದೆ ಮತ್ತು ಖ್ಯಾತ ಚಿತ್ರನಟಿ ಕಂಗನಾ ರಣಾವತ್ ಅವರು ರೈತರ ಪ್ರತಿಭಟನೆಯ ಕುರಿತು ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಬಿಜೆಪಿ ಛೀಮಾರಿ ಹಾಕಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -


ಪಕ್ಷದ ನಾಯಕತ್ವದಿಂದ ನನಗೆ ಛೀಮಾರಿ ಹಾಕಲಾಯಿತು. ಅದು ನನಗೆ ಒಳ್ಳೆಯದು. ನಾನು ಪಕ್ಷದ ಅಂತಿಮ ಧ್ವನಿ ಎಂದು ನಾನು ಭಾವಿಸುವುದಿಲ್ಲ. ಅದನ್ನು ನಂಬಲು ನಾನೇನು ಹುಚ್ಚಿ ಅಥವಾ ಮೂರ್ಖಳಲ್ಲ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಹೇಳಿದ್ದಾರೆ.

“ನನ್ನ ಮಾತಿನಲ್ಲಿ ಹೆಚ್ಚು ಜಾಗರೂಕರಾಗಿರಲು ಮತ್ತು ಪಕ್ಷದ ನೀತಿಗಳಿಗೆ ಹೊಂದಿಕೆಯಾಗಲು ನಾನು ನೋಡುತ್ತಿದ್ದೇನೆ. ಏಕೆಂದರೆ ಬಿಜೆಪಿಗೆ ಹಮ್ ರಹೇ ಯಾ ನಾ ರಹೇ, ಭಾರತ್ ರೆಹನಾ ಚಾಹಿಯೇ (ನಾವು ಇದ್ದರೂ ಇಲ್ಲದಿದ್ದರೂ ಭಾರತ ಉಳಿಯಬೇಕು)” ಎಂದು ಕಂಗನಾ ಹೇಳಿದ್ದಾರೆ.

- Advertisement -


ರೈತರ ಪ್ರತಿಭಟನೆ ಬಗ್ಗೆ ಕಂಗನಾ ರಣಾವತ್ ಹೇಳಿದ್ದೇನು?
ಭಾರತದ ಪ್ರಬಲ ನಾಯಕತ್ವ ಇಲ್ಲದಿದ್ದರೆ ರೈತರ ಪ್ರತಿಭಟನೆಯ ಸಂದರ್ಭದಲ್ಲಿ “ಬಾಂಗ್ಲಾದೇಶದಂತಹ ಪರಿಸ್ಥಿತಿ” ಭುಗಿಲೇಳುತ್ತಿತ್ತು ಎಂದಿದ್ದರು ಕಂಗನಾ. ಆಂದೋಲನದ ಸಮಯದಲ್ಲಿ “ದೇಹಗಳು ನೇತಾಡುತ್ತಿವೆ ಮತ್ತು ಅತ್ಯಾಚಾರಗಳು ನಡೆಯುತ್ತಿವೆ ಎಂದು ಆರೋಪಿಸಿದ ಕಂಗನಾ, ಚೀನಾ ಮತ್ತು ಯುಎಸ್ನಂತಹ ವಿದೇಶಿ ಶಕ್ತಿಗಳು ಚಳುವಳಿಯಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದ್ದರು. ಕಂಗನಾ ರಣಾವತ್ ಅವರ ಹೇಳಿಕೆಗಳನ್ನು ಖಂಡಿಸಿದ ಬಿಜೆಪಿ ಮತ್ತು ಪಕ್ಷದ ನೀತಿ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಅನುಮತಿ ಅಥವಾ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.



Join Whatsapp