ಯಶ್ ಪುಶ್​ ಹೆಸರೆಲ್ಲ​ ನನಗೆ ಗೊತ್ತಿಲ್ಲ: ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ವಿರುದ್ಧ ಆಕ್ರೋಶ

Prasthutha|

ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ರಾಜಧಾನಿಗೆ ಬಂದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯುತ್ತಿದೆ. ನಾಳೆಯೂ ಮುಂದುವರೆಯಲಿದೆ. ಆದರೆ ಈ ಕಂಬಳದ ಬಗ್ಗೆ ಶಾಸಕ ಅಶೋಕ್ ರೈ ಮಾಹಿತಿ ನೀಡುವಾಗ ಆಡಿದ ಮಾತಿನ ಉತ್ತರ ವೈರಲ್ ಆಗುತ್ತಿದ್ದು, ಹಲವಾರು ಮಂದಿ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೆಭಾಷಾ ನಟ ನಟಿಯರ ಬಗ್ಗೆ ಚೆನ್ನಾಗಿ ಗೊತ್ತು ಎಂಬಂತೆ ಹೇಳಿದ ರೈ ಕನ್ನಡ ಚಿತ್ರವನ್ನು ಒಂದು ರೇಂಜಿಗೆ ಕೊಂಡೊಯ್ದ ಕೆಜಿಎಫ್ ಚಿತ್ರದ ಹೀರೋ ಬಗ್ಗೆ ಗೊತ್ತಿಲ್ಲದಂತೆ ಮತ್ತು ವ್ಯಂಗ್ಯವಾಗಿ ಮಾತಾಡಿದ್ದು ತಪ್ಪು ಎಂದು ಕನ್ನಡ ಪರ ನಿಲುವಿನವರು ಮತ್ತು ಯಶ್ ಅಭಿಮಾನಿಗಳು ಆಕ್ರೋಶಿತರಾಗಿದ್ದಾರೆ.

- Advertisement -

ಕಂಬಲ ಸಮಿತಿ ಅಧ್ಯಕ್ಷ ಮತ್ತು ಕನ್ನಡ ನಾಡಿನ ಶಾಸಕರಲ್ಲಿ ಓರ್ವರಾದ ಅಶೋಕ್ ರೈ ಪತ್ರಕರ್ತರೊಂದಿಗೆ ಮಾತಾಡ್ತಾ, ಐಶ್ವರ್ಯಾ ರೈ ಅವರನ್ನು ಕರೆಸಲು ಮಾತುಕತೆ ನಡೆಯುತ್ತಿದೆ. ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ರಜನಿಕಾಂತ್, ಕೆಎಲ್ ರಾಹುಲ್ ಬರ್ತಾರೆ. ಕನ್ನಡದಲ್ಲಿ ಯಶ್​ ಪುಶ್ ಅಂತೆಲ್ಲ ಯಾರ್ಯಾರೋ ಇದಾರೆ ಅವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಕನ್ನಡ ಚಿತ್ರರಂಗದವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದ್ದ ‘ಕೆಜಿಎಫ್ 2’. ಆ ಚಿತ್ರದ ಹೀರೋ ಬಗ್ಗೆ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆಯಾಗಿದೆ.




Join Whatsapp