ಕಲ್ಲಿಕೋಟೆ: ಕೇಂದ್ರ ಸರ್ಕಾರದ ಹಿಂದುತ್ವ ಅಜೆಂಡಾದ ವಿರುದ್ಧ ಹೋರಾಟ ನಡೆಸಿದ ಮುಸ್ಲಿಮ್ ವಿದ್ಯಾರ್ಥಿ ನಾಯಕಿ ಸಫೂರ ಝರ್ಗರ್ ವಿರುದ್ಧ ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸದೆ ಒಂದು ದಿನವನ್ನೂ ಕಳೆದಿಲ್ಲ. ಸಂಘಪರಿವಾರದಿಂದ ಈ ಟ್ರೋಲ್ ಅನ್ನು ಪ್ರತಿರೋಧಿಸದೆ ಮೌನವಹಿಸಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದ್ದಾರೆ.
ಮುಸ್ಲಿಮ್ ಮಹಿಳೆಯರ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಅನಿಯಂತ್ರಿತ ದ್ವೇಷದ ಅಘಾತಕಾರಿ ಅಂಶಗಳನ್ನು ಝರ್ಗರ್ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಜನರು ನನ್ನ ಬಗ್ಗೆ ಏನು ಹೇಳುತ್ತಿದ್ದಾರೆ ಎಂದು ಕಿವಿಗೊಡದೆ, ನಾನು ಬಯಸಿದ್ದನು ಹೇಳಲು ನಿರ್ಧರಿಸಿದ್ದೇನೆ. ನನ್ನ ಮೌನವನ್ನು ಬಯಸುವ ಬಲಪಂಥೀಯರಿಗೆ ವೇದಿಕೆ ಒದಗಿಸಲು ನಾನು ಬಯಸುವುದಿಲ್ಲ. ವಾಸ್ತವದಲ್ಲಿ ಸಂಘಪರಿವಾರ ಮಹಿಳೆಯನ್ನು ನಿಶಬ್ದಗೊಳಿಸಲು, ಸಮಾಜದ ಬದಲಾವಣೆಯಲ್ಲಿ ಹೆಣ್ಣಿನ ಪಾತ್ರವನ್ನು ತಡೆಯಲು, ಹೆಣ್ಣನ್ನು ಅಮಾನವೀಯಗೊಳಿಸಲು ಮತ್ತು ಹೆಣ್ಣಿನ ಪಲಾಯನವನ್ನು ಬಯಸುತ್ತಿದೆ ಎಂದು ಝರ್ಗರ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಮೌನವಹಿಸುವ ಯಾವುದೇ ಆಯ್ಕೆ ನನ್ನ ಮುಂದೆ ಇಲ್ಲ ಎಂದು ಝರ್ಗರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.