ಜೆಡಿಎಸ್ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ, ಅವರೇ ನಮ್ಮ ಮನೆಗೆ ಬಂದಿದ್ದರು: ಸಿಎಂ ಇಬ್ರಾಹಿಂ

Prasthutha|

►’ಮೈತ್ರಿಗೆ 11 ಶಾಸಕರು ವಿರೋಧ

- Advertisement -


ಬೆಂಗಳೂರು: ಜೆಡಿಎಸ್ ಸೇರಲು ನಾನು ಕುಮಾರಸ್ವಾಮಿ ಮನೆಗೆ ಹೋಗಿಲ್ಲ. ಕುಮಾರಸ್ವಾಮಿಯೇ ನಮ್ಮ ಮನೆ ಬಳಿ ಎಷ್ಟು ಬಾರಿ ಬಂದಿದ್ದರು ಗೊತ್ತಾ? ಇತ್ತೀಚೆಗೆ, ಕುಮಾರಸ್ವಾಮಿ ನನ್ನ ಬಳಿ ಯಾವ ವಿಚಾರವೂ ಪ್ರಸ್ತಾಪ ಮಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇನ್ನೂ ನಾಲ್ಕು ವರ್ಷ ಅವಧಿಯಿದ್ದ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಬಿಟ್ಟು JDSಗೆ ಬಂದಿದ್ದೇನೆ. ಪೋಸ್ಟರ್ ಮತ್ತು ಬ್ಯಾನರ್ನಲ್ಲಿ ಎಲ್ಲಾ ಜನರ ಹೃದಯದಲ್ಲಿದ್ದೇನೆ ಎಂದರು.

- Advertisement -


ಮೈತ್ರಿಗೆ ನಾವು ಒಪ್ಪುವುದಿಲ್ಲ ಎಂದು 11 ಶಾಸಕರು ಹೇಳಿದ್ದಾರೆ. ಶಾಸಕರೇ ನನ್ನ ಬಳಿ ಹೇಳಿದ್ದಾರೆ, ಆದ್ರೆ ಹೆಸರು ಪ್ರಸ್ತಾಪ ಮಾಡಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ನನಗೆ ಗೌರವ ಇದೆ. ಅವರು ಏನು ಹೇಳ್ತಾರೆ ನೋಡಿ ಮುಂದಿನ ತೀರ್ಮಾನ ಕೈಗೊಳ್ತೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

Join Whatsapp