ಸಂಭಾಜಿ ರಾವ್‌ ಬಿಢೆಯ ಕಾಲಿಗೆ‌ ನಮಸ್ಕರಿಸುವಾಗ ನನಗೆ ಅವರ ಪರಿಚಯವಿರಲಿಲ್ಲ: ಸುಧಾಮೂರ್ತಿ

Prasthutha|

ಬೆಂಗಳೂರು: ಸಂಭಾಜಿ ರಾವ್‌ ಬಿಢೆಯ ಕಾಲಿಗೆ‌ ನಮಸ್ಕರಿಸುವಾಗ ನನಗೆ ಅವರ ಪರಿಚಯವಿರಲಿಲ್ಲ ಎಂದು ಸುಧಾಮೂರ್ತಿ ಹೇಳಿಕೆ ನೀಡಿದ್ದಾರೆ.

- Advertisement -

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇತ್ತಿಚೆಗೆ ಇನ್ಫೋಸಿಸ್ ಸಹ-ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಬಲಪಂಥೀಯ ನಾಯಕ ಸಂಭಾಜಿ ರಾವ್ ಭಿಡೆ ಅವರ ಕಾಲಿಗೆ ನಮಸ್ಕರಿಸಿದ್ದ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.  

ಈ ಕುರಿತು ಹೇಳಿಕೆ ನೀಡಿದ ಸುಧಾ ಮೂರ್ತಿ, ಮೊದಲು ನನಗೆ ಭಿಡೆ ಅವರ ಅವರ ಪರಿಚಯವಿರಲಿಲ್ಲ. ಹಿರಿಯರಾಗಿದ್ದ ಅವರನ್ನು ಗೌರವಿಸುವ ಸಲುವಾಗಿ ನಾನು ಅವರಿಗೆ ನಮಸ್ಕರಿಸಿದ್ದೆ ಎಂದು ಹೇಳಿದ್ದಾರೆ.

- Advertisement -

ಪತ್ರಕರ್ತೆಯೊಬ್ಬರು ಬಿಂದಿ ಧರಿಸದೆ ಇದ್ದ ಕಾರಣ ಅವರನ್ನು ಅವಮಾನಿಸಿದ್ದ ಬಿಢೆ ಅವರ ನಡೆ ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.  



Join Whatsapp