ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧವಿದೆ: ಜೆಡಿಎಸ್ ಶಾಸಕ ಶರಣಗೌಡ

Prasthutha|

ಬೆಂಗಳೂರು: ಬಿಜೆಪಿ ಜೊತೆ ಮೈತ್ರಿಗೆ ಈಗಲೂ ನನ್ನ ವಿರೋಧ ಇದೆ. ನನ್ನ ಹಿಂದಿನ ಹೇಳಿಕೆಗೆ ಈಗಲೂ ಬದ್ದ ಎಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಹೇಳಿದ್ದಾರೆ.

- Advertisement -


ಹಾಸನದಲ್ಲಿ ನಡೆದ ಜೆಡಿಎಸ್ ಸಭೆಗೆ ಗೈರಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಭೆಗೆ ಹೋಗದೇ ಇರಲು ಪಕ್ಷದ ವಿರುದ್ದ ಸಮಾಧಾನ ಅಸಮಾಧಾನ ಪ್ರಶ್ನೆ ಅಲ್ಲ. ಅನೇಕ ದಿನಗಳಿಂದ ಸಮಿತಿ ಸಭೆಗೆ ಹೋಗಿರಲಿಲ್ಲ. ಸಮಿತಿ ಸಭೆ ಇವತ್ತು ಇದೆ ಅದಕ್ಕೆ ಸಭೆಗೆ ಹೋಗಿಲ್ಲ ಎಂದು ತಿಳಿಸಿದರು.


ವರಿಷ್ಠರು ಸಭೆಗೆ ಆಹ್ವಾನ ಮಾಡಿದ್ದರು. ನಾನು ಸಭೆಗೆ ಬರುವುದಿಲ್ಲ ಎಂದು ಹೇಳಿಲ್ಲ. ಸಮಿತಿ ಸಭೆ ಇರುವುದರಿಂದ ನಾನು ಹೋಗಲಿಲ್ಲ ಅಷ್ಟೇ ಎಂದು ತಿಳಿಸಿದರು. ಮೈತ್ರಿಗೆ ನನ್ನ ಅಸಮಾಧಾನ ಇದೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್ ನಿಂದ ದೂರ ಆಗುತ್ತಿಲ್ಲ. ಅಸಮಾಧಾನ ಇದ್ದರೂ ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ ಎಂದರು.



Join Whatsapp