ಪುಣೆ: ನಾನು ಮಾಜಿ ಮುಖ್ಯಮಂತ್ರಿಯಷ್ಟೇ, ತಿರಸ್ಕೃತ ಅಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಪುಣೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿರುವ ಚೌಹಾಣ್, ಜನರ ಪ್ರೀತಿಯೇ ನಿಜವಾದ ಸಂಪತ್ತು, ನಾನು ರಾಜಕೀಯ ಮಾಡುತ್ತೇನೆ ಆದರೆ ಯಾವುದೇ ಹುದ್ದೆಗೆ ರಾಜಕೀಯ ಮಾಡುವುದಿಲ್ಲ ಎಂದರು.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದೇನೆ ಎಂದರೆ ನಾನು ಸಕ್ರಿಯ ರಾಜಕಾರಣವನ್ನು ತೊರೆಯುತ್ತೇನೆ ಎಂದು ಅರ್ಥವಲ್ಲ,ನು ಯಾವುದೇ ಹುದ್ದೆಗಾಗಿ ರಾಜಕೀಯದಲ್ಲಿಲ್ಲ, ಆದರೆ ಜನರ ಸೇವೆಗಾಗಿ ಮಾಡಿದ್ದೇವೆ.