ಬೆಂಗಳೂರು: ನಾನೇನು ಸನ್ಯಾಸಿಯಲ್ಲ ಎಂದು ಹೇಳುವ ಮೂಲಕ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ನಂತರ ವೈಯಕ್ತಿಕ ರಾಜಕೀಯದ ಬಗ್ಗೆ ನೊಡೋಣ ಎಂದು ಹೇಳಿದರು.
ನಾನು ಸಂಭ್ರಮದಲ್ಲಿದ್ದಾಗ ಯಾರನ್ನು ಮನಸ್ಸು ನೋಯಿಸುವುದಿಲ್ಲ. ನಾನು ಒಂದೇ ರೀತಿ ಯೋಚನೆ ಮಾಡುತ್ತೇನೆ. ಚೆಸ್ ಇಬ್ಬರು ಪ್ರತಿಸ್ಪರ್ಧಿಗಳ ನಡುವೆ ನಡೆಯುವುದು. ರಾಜಕಾರಣ ಫುಟ್ ಬಾಲ್ ರೀತಿ, ಎಲ್ಲರೂ ಟೀಮ್ ವರ್ಕ್ ಮಾಡಬೇಕು ಎಂದರು.