ಮೈಸೂರು: ನಾನು ಖಂಡಿತವಾಗಿಯೂ ನ್ಯಾಷನಲ್ ಲೀಡರ್ ಅಲ್ಲ. ಈ ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಮಾತನ್ನು ಒಪ್ಪುತ್ತೇನೆ. ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದವನು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಒಳ್ಳೆಯ ಹೆಸರು ಮಾಡಿ, ಸಂಸದನಾಗಿ ಆಯ್ಕೆಯಾಗಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲಸ ಮಾಡಿಸಲು ಪ್ರತಿಯೊಬ್ಬ ಸಚಿವರ ಕೈ ಕಾಲು ಹಿಡಿದು ಜನರ ಸೇವೆ ಮಾಡುತ್ತಿದ್ದೇನೆ. ನಾನೊಬ್ಬ ಸಂಸದ ಅಷ್ಟೇ. ನಾನು ನ್ಯಾಷನಲ್ ಲೀಡರ್ ಆಗಿದ್ದರೆ, ತಮ್ಮ ಖಾಸಗಿ ಮ್ಯಾಟರ್ಸ್ ಕಂಪನಿಗೆ ಸರ್ಕಾರಿ ಲ್ಯಾಬ್ ನಲ್ಲಿ ಕಾಂಟ್ರಾಕ್ಟ್ ತೆಗೆದುಕೊಳ್ಳಲಾಗುತ್ತಿತ್ತೆ? ಬಿಡಿಎ ಸೈಟ್ ತೆಗೆದುಕೊಳ್ಳುತ್ತಿದ್ದೆ. ನ್ಯಾಷನಲ್ ಲೀಡರ್ ಆದವರು ಮಾತ್ರ ಹೀಗೆ ಮಾಡಲು ಸಾಧ್ಯ. ಅಪ್ಪನಿಗೆ ನೆಲೆ ಒದಗಿಸುವ ರೀತಿಯಲ್ಲಿ ಅವರನ್ನು ಬಾದಾಮಿಗೆ ಓಡಿಸಿ ತಾವು ವರುಣಾ ಕ್ಷೇತ್ರದಲ್ಲಿ ಶಾಸಕರಾಗುವಷ್ಟು ನ್ಯಾಷನಲ್ ಲೀಡರ್ ಅಲ್ಲ ನಾನಲ್ಲ. ಅಪ್ಪ ಮುಖ್ಯಮಂತ್ರಿ ಆದ ಕೂಡಲೇ ವರ್ಗಾವಣೆ ವಿಚಾರದಲ್ಲಿ ನಾನು ಹೇಳಿದ ಲಿಸ್ಟ್ ಗೆ ಮಾತ್ರ ಸಹಿ ಹಾಕಿ ಎಂದು ಇನ್ಫ್ಲುಯೆನ್ಸ್ ಮಾಡುವಷ್ಟು ನ್ಯಾಷನಲ್ ಲೀಡರ್ ಅಲ್ಲ. ಅದು ಅವರಿಗೆ ಮಾತ್ರ ಸಾಧ್ಯ. ಅಪ್ಪನನ್ನೇ ಡಿಕ್ಟೇಟ್ ಮಾಡುವಷ್ಟು ಲೀಡರ್ ನಾನಲ್ಲ. ಯತೀಂದ್ರ ಸಿದ್ದರಾಮಯ್ಯ ಮೈಸೂರು ಭಾಗದ ನ್ಯಾಷನಲ್ ಲೀಡರ್” ಎಂದು ಯತೀಂದ್ರ ಸಿಂಹ ವಾಗ್ದಾಳಿ ನಡೆಸಿದರು.