ಬೆಂಗಳೂರು: ದೇವರ ಹಾಗೂ ತಂದೆತಾಯಿಗಳ ಆಶೀರ್ವಾದದಿಂದ ನಾನು ಆರಾಮಾಗಿದ್ದೇನೆ ಎಂದು ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಕಾರಿನ ಚಾಲಕ ಸೇರಿದಂತೆ ಎಲ್ಲಾ ಕ್ಷೇಮವಾಗಿದ್ದು, ಯಾರೂ ಸಹ ಆತಂಕ, ಗಾಬರಿಯಾಗುವ ಅವಶ್ಯಕತೆಯಿಲ್ಲ. ನನಗಾಗಿ ಹಾರೈಸಿದ ಶುಭಕೋರಿದ ಪ್ರಾರ್ಥಿಸಿದ ನನ್ನೆಲ್ಲ ಮತಬಾಂಧವರಿಗೂ ಹಿತೈಷಿಗಳಿಗೂ ಜಿಲ್ಲಾ ಹಾಗೂ ಮತಕ್ಷೇತ್ರದ ಜನತೆಗೂ, ಅಭಿಮಾನಿಗಳಿಗೂ, ಪಕ್ಷದ ಎಲ್ಲಾ ಕಾರ್ಯಕರ್ತ ಮುಖಂಡರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ಸಚಿವರು ಸ್ಪಷ್ಟಪಡಿಸಿದ್ದಾರೆ.