ಆಪ್ ತೊರೆಯುವಂತೆ ನನಗೆ ಸಿಬಿಐ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ: ಮನೀಶ್ ಸಿಸೋಡಿಯಾ ಸ್ಫೋಟಕ ಹೇಳಿಕೆ

Prasthutha|

ನವದೆಹಲಿ: ಸೋಮವಾರ ಕೇಂದ್ರೀಯ ದಳದಿಂದ ಒಂಬತ್ತು ಗಂಟೆಗಳ ಕಾಲ ವಿಚಾರಣೆಯನ್ನು ಎದುರಿಸಿದ ನಂತರ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

- Advertisement -

ದೆಹಲಿ ಸರ್ಕಾರದ ವಿವಾದಾತ್ಮಕ ಮದ್ಯ ನೀತಿಯ ಬಗ್ಗೆ ತನ್ನನ್ನು ಪ್ರಶ್ನಿಸಲು ಕರೆದಿದ್ದ ಕೇಂದ್ರ ಅಧಿಕಾರಿಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ತೊರೆಯುವಂತೆ ನನ್ನ ಮೇಲೆ ಒತ್ತಾಯ ಹೇರಿದರು ಎಂದು ಸಿಸೋಡಿಯಾ ಸುದ್ದಿಗಾರರಿಗೆ ಹೇಳಿದರು.

ಪಕ್ಷ ತೊರೆಯದಿದ್ದರೆ, ಮನಿ ಲಾಂಡರಿಂಗ್ ಪ್ರಕರಣದ ಆರೋಪದಲ್ಲಿ ಮೇ ತಿಂಗಳಿನಿಂದ ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದರ್ ಜೈನ್ ರಂತೆ ತಮ್ಮ ಪ್ರಕರಣವು ಹೋಗಬಹುದು ಎಂದು ತನಗೆ ಬೆದರಿಕೆ ಹಾಕಿದರು ಎಂದು ಸಿಸೋಡಿಯಾ ಆರೋಪಿಸಿದರು. ಪಕ್ಷ ತೊರೆದು ಬಂದರೆ ತಮ್ಮನ್ನು ಸಿಎಂ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾಗಿ ಸಿಸೋಡಿಯಾ ಸುದ್ದಿಗಾರರೊಂದಿಗೆ ತಿಳಿಸಿದರು.

- Advertisement -

ಸಿಸೋಡಿಯಾ ಹೇಳಿಕೆಯನ್ನು ಏಜೆನ್ಸಿಯು ನಿರಾಕರಿಸಿದ್ದು
ಎಫ್ಐಆರ್ ನಲ್ಲಿ ಶ್ರೀ ಸಿಸೋಡಿಯಾ ವಿರುದ್ಧದ ಆರೋಪಗಳ ಪ್ರಕಾರ ವೃತ್ತಿಪರ ಮತ್ತು ಕಾನೂನು ರೀತಿಯಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಹೇಳಿದೆ. ಮತ್ತು ಪ್ರಕರಣದ ತನಿಖೆಯು ಕಾನೂನಿನ ಪ್ರಕಾರ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದೆ.



Join Whatsapp