ಮುಂಬೈ: ಸದಾ ವಿವಾದಗಳ ಮೂಲಕವೇ ಸುದ್ದಿ ಆದವರು ನಟಿ ಪೂನಂ ಪಾಂಡೆ ಅವರು ಸತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸ್ವತಃ ಪೂನಂ ಪಾಂಡೆ ಖಾತೆ ಮೂಲಕ ಸಾವಿನ ವಿಚಾರ ತಿಳಿಸಲಾಗಿತ್ತು. ಆದರೆ, ಪೂನಂ ಪಾಂಡೆ ಬದುಕಿದ್ದಾರೆ. ತಾವು ಸುಳ್ಳು ಹೇಳಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದೆ ಎಂದು ಅವರು ಹೇಳಿದ್ದಾರೆ. ಅವರಿಗೆ ಬಾಯಿಗೆ ಬಂದಂತೆ ಎಲ್ಲರೂ ಬೈಯ್ಯುತ್ತಿದ್ದಾರೆ.
ತಾನು ಬದುಕಿದ್ದೇನೆ. ಹಾಗೆ ಮಸೇಜ್ ಮಾಡಲು ಕಾರಣವಿದೆ. ಗರ್ಭಕೋಶ ಕಂಠ ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸಬೇಕಿತ್ತು. ಹಾಗಾಗಿ ಈ ಪೋಸ್ಟ್ ಮಾಡಲಾಯಿತು. ದಯವಿಟ್ಟು ಈ ಕ್ಯಾನ್ಸರ್ ಕುರಿತಂತೆ ಜಾಗೃತ ವಹಿಸಿ ಎಂದು ಪೂನಂ ವಿಡಿಯೋ ಮೂಲಕ ಹೇಳಿದ್ದಾರೆ.