ಸಿದ್ದರಾಮಯ್ಯಗೆ ನಾನು ರಾಜಕೀಯ ವಿಲನ್… ಅದು ನಿಜವೇ: ಹೆಚ್ ಡಿ ಕುಮಾರಸ್ವಾಮಿ

Prasthutha|

ಬೆಂಗಳೂರು: ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಸವಾಲು ಹಾಕಿದ್ದರು. ಇದೀಗ ಈ ಸವಾಲನ್ನು ಸ್ವೀಕರಿಸಿರುವ ಹೆಚ್ ಡಿಕೆ, ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ.

- Advertisement -


ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಅವರು, “ಡಿ. ಕೆ. ಶಿವಕುಮಾರ್ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಬಹಿರಂಗ ಚರ್ಚೆಗೆ ನನ್ನ ಒಪ್ಪಿಗೆ ಇದೆ. ನಾನು ಪಲಾಯನ ಮಾಡುವುದಿಲ್ಲ. ನನ್ನ ಬಳಿ ಸಾಕಷ್ಟು ಸರಕು ಇದೆ. ಚರ್ಚೆ ಮಾಡೋಣ ಬನ್ನಿ. ಡಿಕೆಶಿ ಹೇಳಿಕೆಯನ್ನು ನಾನು ಸ್ವಾಗತಿಸಿದ್ದೇನೆ” ಎಂದರು.

ಸಿದ್ದರಾಮಯ್ಯ ಅವರಿಗೆ ನಾನು ರಾಜಕೀಯ ವಿಲನ್. ಅದು ನಿಜವೇ. ನಾನು ಅವರಿಗೆ ಸ್ನೇಹಿತ ಎಂದು ಹೇಳೋದಿಕ್ಕೆ ಆಗೋದಿಲ್ಲ ಎನ್ನುವ ಮೂಲಕ ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ ಎಂಬ ಸಿದ್ದರಾಮಯ್ಯ ಹೇಳಿಕೆಗೂ ಹೆಚ್ ಡಿಕೆ ತಿರುಗೇಟು ನೀಡಿದ್ದಾರೆ.

Join Whatsapp