ಶಿವಮೊಗ್ಗ: ಗೀತಾ ಗೆದ್ರೆ ನಾನೂ ಕೆಲಸ ಮಾಡಿಸಿಯೇ ಮಾಡಿಸುತ್ತೇನೆ. ನನ್ನ ಹೆಂಡತಿಗೆ ನಾನೇ ಗ್ಯಾರಂಟಿ, ನನ್ನ ಹೆಂಡತಿ ಕೆಲಸ ಮಾಡೇ ಮಾಡುತ್ತಾಳೆ ಎಂದು ನಾನು ಗ್ಯಾರಂಟಿ ಕೊಡುತ್ತೇನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಪತ್ನಿ ಗೀತಾ ಪರ ಮತಯಾಚಿಸಿದ ಶಿವರಾಜ್ಕುಮಾರ್, ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎನ್ನುತ್ತಾ ನನ್ನ ಹೆಂಡತಿಯನ್ನು ಗೆಲ್ಲಿಸಿ ಎಂದಿದ್ದಾರೆ.
ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲೂ ಇದ್ದಾರೆ. ಕೂಲಿ ಕೆಲಸ ಮಾಡುವುದರಿಂದ ಹಿಡಿದು ಫ್ಲೈಟ್ ಓಡಿಸುವವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡ್ತಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಸ್ಪರ್ಧಿಸಿರುವ ಗೀತಾರನ್ನು “ಇಲ್ಲಿ ಎಲ್ಲಿದೆ ನಿಮ್ಮ ಮನೆ” ಅಂತ ಕೇಳ್ತಿದ್ದಾರೆ. ಗೀತಾ ಹುಟ್ಟಿ ಬೆಳೆದಿದ್ದು ಇಲ್ಲೇ, ಇಲ್ಲೇ ಹುಟ್ಟಿ ಬೆಳದ ಮೇಲೆ ಅವರ ಮನೆಯೂ ಇಲ್ಲೇ ಇರುತ್ತದೆ ಎಂದು ವಿರೋಧಿಗಳಿಗೆ ಶಿವರಾಜ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.