ಹೈದರಾಬಾದ್: ಬೈಕ್ ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ಎಳೆದೊಯ್ದ ಟ್ರಕ್

Prasthutha|

ಹೈದರಾಬಾದ್: ಟ್ರಕ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ಎಳೆದೊಯ್ದಿರುವ ಘಟನೆ ನಡೆದಿದೆ.

- Advertisement -


ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ. ಆದರೆ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾನೆ.
ಅಪಘಾತ ಸಂಭವಿಸಿದ ಬಳಿಕ ಬೈಕ್ ಸವಾರ ಟ್ರಕ್ ನ ಬಲಭಾಗದ ಕಿಟಕಿ ಹಿಡಿದು ನಿಂತಿದ್ದಾನೆ. ಚಾಲಕ ಟ್ರಕ್ ನಿಲ್ಲಿಸದೇ ಸುಮಾರು ದೂರು ಚಲಾಯಿಸಿದ್ದಾನೆ.
ಕೆಲವರು ಈ ಘಟನೆಯ ವಿಡಿಯೊ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp