ಮಸೀದಿ ತೆರವುಗೊಳಿಸಲು ರೈಲ್ವೆ ಇಲಾಖೆ ನೋಟಿಸ್: ಸಾರ್ವಜನಿಕರಿಂದ ಪ್ರತಿಭಟನೆ

Prasthutha|

ಹೈದರಾಬಾದ್: ಸಿಕಂದರಾಬಾದ್ ಚಿಲ್ಕಲ್ ಗುಡಾ ಎಂಬಲ್ಲಿ ಮಸೀದಿಯನ್ನು ತೆರವುಗೊಳಿಸುವಂತೆ ದಕ್ಷಿಣ ಕೇಂದ್ರ ರೈಲ್ವೆ ಇಲಾಖೆ ನೋಟಿಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

- Advertisement -

ರೈಲ್ವೆ ಇಲಾಖೆಯ ನಡೆಯನ್ನು ವಿರೋಧಿಸಿ ಶುಕ್ರವಾರ ನಮಾಝ್ ಬಳಿಕ ನೂರಾರು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಜನವರಿ 10 ರಂದು ಅಭಿವೃದ್ಧಿ ಯೋಜನೆಯ ಹಿನ್ನೆಲೆಯಲ್ಲಿ ಮಸೀದಿಯನ್ನು ತೆರವುಗೊಳಿಸುವ ಸಂಬಂಧ ದಕ್ಷಿಣ ಕೇಂದ್ರ ರೈಲ್ವೆ, ಚಿಲ್ಕಲ್ ಗುಡಾದಲ್ಲಿರುವ ಸೈಯದುನಾ ಫೌನ್ ಉಲ್ ಅಜಮ್ ಮಸೀದಿಯ ಅಧ್ಯಕ್ಷ ಮುಹಮ್ಮದ್ ಯೂಸುಫ್ ಅನ್ಸಾರಿ ಅವರಿಗೆ ನೋಟಿಸ್ ನೀಡಿದೆ.

- Advertisement -

ಚಿಲ್ಕಲ್ ಗುಡಾ ಮತ್ತು ರೈಫಲ್ ರೇಂಜ್ ರೈಲ್ವೆ ಕ್ವಾಟರ್ಸ್ ನಲ್ಲಿರುವ ರೈಲ್ವೆ ಜಮೀನುಗಳನ್ನು ಮರು ಅಭಿವೃದ್ಧಿ ಕಾರ್ಯಕ್ಕಾಗಿ ರೈಲ್ ಲ್ಯಾಂಡ್ ಡೆವಲಪ್ ಮೆಂಟ್ ಅಥಾರಿಟಿ ಗೆ ವಹಿಸಲಾಗಿದೆ ಎಂದು ಎಸ್. ಸಿ.ಆರ್ ನೋಟಿಲ್ ಪತ್ರದಲ್ಲಿ ನಮೂದಿಸಿದೆ.

ಮಾತ್ರವಲ್ಲ RLDA ಭೂಮಿಯನ್ನು ಬಳಸಲು ಬಯಸುತ್ತಿರುವುದರಿಂದ ಮಸೀದಿ ತೆರವುಗೊಳಿಸಲು ಆಡಳಿತ ಸಮಿತಿಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಜನವರಿ 28 ರಂದು ತೆರವು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ರೈಲ್ವೆ ಇಲಾಖೆ ನೋಟಿಸ್ ನಲ್ಲಿ ಸೂಚಿಸಿದೆ.



Join Whatsapp