ಹೈದರಾಬಾದ್: ನಿಝಾಮರ ಕಾಲದ ಪೆಟ್ರೋಲ್ ಪಂಪ್ ಪಾರ್ಕ್’ನಲ್ಲಿ ಪತ್ತೆ!

Prasthutha|

ಹೈದರಾಬಾದ್: ನಿಝಾಮರ ಕಾಲದ ಪೆಟ್ರೋಲ್ ಪಂಪ್ ಹೈದರಾಬಾದ್ ನ ಕೆಬಿಆರ್ ಪಾರ್ಕ್ ನಲ್ಲಿ ಪತ್ತೆಯಾಗಿದೆ.

- Advertisement -


ಉದ್ಯಾನದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅದನ್ನು ಗಮನಿಸಿದ್ದಾರೆ. ಅವರು ಪೆಟ್ರೋಲ್ ಬಂಕ್ ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಇಷ್ಟು ವರ್ಷ ಗಿಡ ಮರಗಳ ಮಧ್ಯೆ ಮರೆಯಾಗಿದ್ದ ಈ ಪೆಟ್ರೋಲ್ ಪಂಪ್ ಬೇಸಿಗೆ ಬಂದಾಗ… ಆ ಗಿಡಮರಗಳು ಒಣಗಿದಾಗ ಅದು ಪತ್ತೆಯಾಗಿದೆ.


ನಿಝಾಮರು ತನ್ನ ಕಾರುಗಳು, ಮೋಟಾರು ಯಂತ್ರಗಳು ಮತ್ತು ಇತರ ವಾಹನಗಳಿಗೆ ಇಂಧನ ತುಂಬಲು ಇದನ್ನು ಬಳಸುತ್ತಿದ್ದ ಎಂದು ಹೇಳಲಾಗುತ್ತದೆ.

- Advertisement -



Join Whatsapp