SI ಪರೀಕ್ಷೆಯಲ್ಲಿ ಅನುತ್ತೀರ್ಣನಾದರೂ IPS ಪಾಸಾದ ಯುವಕ!

Prasthutha|

ಹೈದರಾಬಾದ್: ಮೂರು ವರ್ಷಗಳ ಹಿಂದೆ SI ಫಿಟ್‌ನೆಸ್ ಪರೀಕ್ಷೆಯ 800 ಮೀಟರ್‌ ಓಟದಲ್ಲಿ ಸಿರಿಸೆಟ್ಟಿ ಸಂಗೀರ್ತ್ ಅವರು ಕೆಲವೇ ಸೆಕೆಂಡುಗಳ ಅಂತರದಲ್ಲಿ ಸೋತಿದ್ದರು. ಇದರೊಂದಿಗೆ ಪೊಲೀಸ್ ಅಧಿಕಾರಿಯಾಗುವ ಅವರ ಕನಸು ಅಂದು ಭಗ್ನಗೊಂಡಿತ್ತು.

- Advertisement -

ಆದರೆ ಶುಕ್ರವಾರ ಹೈದರಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಪಾಸಿಂಗ್ ಔಟ್ ಪರೇಡ್ನಲ್ಲಿ 132 ಐಪಿಎಸ್ ಅಧಿಕಾರಿಗಳಲ್ಲಿ ಸಂಗೀರ್ತ್ ಕೂಡಾ ಇರಲಿದ್ದಾರೆ.

ಹೌದು, 27ರ ಹರೆಯದ ಸಂಗೀರ್ತ್ SI ಕನಸನ್ನು ಕಳೆದುಕೊಂಡರೂ ಕಠಿಣ ಪರಿಶ್ರಮದಿಂದ IPS ಅಧಿಕಾರಿಯಾಗಿದ್ದಾರೆ. ತೆಲಂಗಾಣದ ಬೆಳ್ಳಂಪಲ್ಲಿ ಮೂಲದ ಎಲೆಕ್ಟ್ರಿಷಿಯನ್ ಮಗನಾಗಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಂಗೀರ್ತ್ ರಾಜ್ಯ ಪೊಲೀಸ್ ನ SI ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು.

- Advertisement -

ಆರ್ಥಿಕ ಹಿಂದುಳಿದ ತನ್ನ ಕುಟುಂಬಕ್ಕೆ ನೆರವಾಗಲು ಜಲವಿದ್ಯುತ್ ಯೋಜನೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ನಿತ್ಯ ಬೆಳಗ್ಗೆ 7.30ಕ್ಕೆ ಕಚೇರಿಗೆ ಬರುತ್ತಿದ್ದ ಸಂಗೀರ್ತ್ ಕೆಲಸ ಮಾಡುತ್ತಲೇ ಯುಪಿಎಸ್ ಸಿ ಪರೀಕ್ಷೆ ಓದಲು ಸಮಯ ಕಂಡುಕೊಂಡಿದ್ದರು.

ಅಂತಿಮವಾಗಿ, ಮೂರನೇ ಪ್ರಯತ್ನದಲ್ಲಿ ಅವರು UPSC ಅರ್ಹತೆ ಗಳಿಸಿದ್ದಾರೆ. ಪಾಸಿಂಗ್ ಔಟ್ ಪರೇಡ್ ನಂತರ ಅವರು ಉನ್ನತ ಮಟ್ಟದ ತರಬೇತಿಗಾಗಿ ಫ್ರಾನ್ಸ್‌ಗೆ ಹಾರಲಿದ್ದಾರೆ.

Join Whatsapp