ಹೈದರಾಬಾದ್: ಬಿಜೆಪಿ ಶಾಸಕ ರಾಜಾಸಿಂಗ್ ಪೊಲೀಸ್ ವಶಕ್ಕೆ

Prasthutha|

ಹೈದರಾಬಾದ್: ಬಿಜೆಪಿ ಗೋಶಾಮಹಲ್ ಶಾಸಕ ರಾಜಾ ಸಿಂಗ್ ಅವರನ್ನು ಯಲ್ಲರೆಡ್ಡಿಪೇಟೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪಟ್ಟಣದಲ್ಲಿ ಟಿಆರ್ ಎಸ್ ಕಾರ್ಯಕರ್ತರೊಂದಿಗಿನ ಜಗಳದಲ್ಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಲು ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಯಲ್ಲರೆಡ್ಡಿಪೇಟೆಗೆ ಹೋಗುತ್ತಿದ್ದರು.

- Advertisement -

ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯ ಯಲ್ಲರೆಡ್ಡಿಪೇಟೆಯಲ್ಲಿ ಶುಕ್ರವಾರ ಬಿಜೆಪಿ ಮತ್ತು ಟಿಆರ್ ಎಸ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಗಾಯಗೊಂಡ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಶಾಸಕರು ತೆರಳುತ್ತಿದ್ದಾಗ ಪೊಲೀಸರು ಅಲ್ವಾಲ್ ನಲ್ಲಿ ಅವರ ಬೆಂಗಾವಲು ಪಡೆಯನ್ನು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾಗ್ರತಾ ವಶಕ್ಕೆ ತೆಗೆದುಕೊಂಡು ಅಲ್ವಾಲ್ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ನಂತರ ಅವರನ್ನು ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp