ಗಂಡು ಮಗುವಿಗೆ ಜನ್ಮ ನೀಡದಕ್ಕಾಗಿ ಮಹಿಳೆಯನ್ನು ನಡುರಸ್ತೆಯಲ್ಲಿ ಥಳಿಸಿದ ಪತಿ ಕುಟುಂಬಸ್ಥರು

Prasthutha|

ಲಖನೌ: ಗಂಡು ಮಗು ನೀಡದೇ ಬರೀ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಹೊಡೆದ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವರದಿಯಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಮಹಿಳೆ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ಈ ಇಬ್ಬರು ಮಹಿಳೆಯರು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಡ ಮತ್ತು ಅತ್ತೆ-ಮಾವಂದಿರು ನನಗೆ ಗಂಡು ಮಗುವಾಗಲಿಲ್ಲ ಎಂದು ಚಿತ್ರಹಿಂಸೆ ನೀಡುತ್ತಿದ್ದರು. ಎರಡನೇ ಮಗಳು ಹುಟ್ಟಿದ ನಂತರ ಕಿರುಕುಳ ಹೆಚ್ಚಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp