ಪತ್ನಿಗೆ ಗುಂಡು ಹಾರಿಸಿದ ಪತಿ; ಅಥಣಿ ಪೊಲೀಸರ ಅತಿಥಿ

Prasthutha|

ಬೆಳಗಾವಿ:  ಪತಿಯ ಅನೈತಿಕ ಸಂಬಂಧವನ್ನು ಅರಿತು ತವರು ಸೇರಿದ ಪತ್ನಿಗೆ ಸಿಟ್ಟಿಗೆದ್ದ ಪತಿ ಮಹಾಶಯನೊಬ್ಬಗುಂಡು ಹಾರಿಸಿರುವ ಘಟನೆ  ಅಥಣಿಯಲ್ಲಿ ನಡೆದಿದೆ.

- Advertisement -

ಪತ್ನಿಯ ತವರು ಮನೆಗೆ ಬಂದು ಕೊಲ್ಲುವುದಾಗಿ ಬೆದರಿಕೆ ಹಾಕಿ ರಿವಾಲ್ವಾರ್ ನಿಂದ ಗುಂಡು ಹಾರಿಸಿದ ಶಿವಾನಂದ ಕಾಗಲೇ(40)ಯನ್ನು ಪೊಲೀಸರು ಬಂಧಿಸಿದ್ದಾರೆ. ಅದೃಷ್ಟವಶಾತ್ ತಪ್ಪಿಸಿಕೊಂಡ ಪತ್ನಿ  ಪ್ರೀತಿ ಪ್ರಾಣ ಉಳಿಸಿಕೊಂಡಿದ್ದಾಳೆ.

ನಾಲ್ಕು ವರ್ಷಗಳ ಹಿಂದೆ ಶಿವಾನಂದ್ ಹಾಗೂ ಪ್ರೀತಿ ಮದುವೆಯಾಗಿದ್ದರು. ನಂತರದ ದಿನಗಳಲ್ಲಿ ಶಿವಾನಂದ್ ಪರಸ್ತ್ರೀ ಜೊತೆ  ಅನೈತಿಕ ಸಂಬಂಧ ಹೊಂದಿರುವುದು ಪತ್ನಿ ಪ್ರೀತಿಗೆ ತಿಳಿಯಿತು. ಈ ಬಗ್ಗೆ ಪತಿಯನ್ನುಪ್ರಶ್ನಿಸಿದ ಪ್ರೀತಿ ಮುನಿಸಿಕೊಂಡು ಅಥಣಿಯಲ್ಲಿರುವ ತನ್ನ ತವರು ಸೇರಿದ್ದಳು.

- Advertisement -

ನೀನು ಮನೆಗೆ ಬರಲೇಬೇಕು ಎಂದು ಪರವಾನಗಿ ಪಡೆದ  ರಿವಾಲ್ವಾರ್ ನೊಂದಿಗೆ ಅಥಣಿಗೆ ಬಂದಿದ್ದ ಶಿವಾನಂದ್, ಎರಡು ಬಾರಿ ಗುಂಡು ಹಾರಿಸಿ ನಾಲ್ಕು ಗುಂಡು ಬಾಕಿ ಇಟ್ಟುಕೊಂಡಿದ್ದ. ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತೀನಿ. ಇಬ್ಬರೂ ಸಾಯೋಣ ಎಂದು ಪತ್ನಿಯನ್ನು ಬೆದರಿಸಿದ್ದ.

ಆತಂಕಗೊಂಡ ಪ್ರೀತಿ  ನೀಡಿದ ದೂರಿನನ್ವಯ ಅಥಣಿ ಪೊಲೀಸರು ಶಿವಾನಂದನನ್ನು ಬಂಧಿಸಿದ್ದಾರೆ.



Join Whatsapp