ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಮೇಲೆ ಪತಿ ಸಚಿನ್ ತೀವ್ರ ಹಲ್ಲೆ?​

Prasthutha|

ನವದೆಹಲಿ: ಸಚಿನ್ ಎಂಬಾತನ ಪ್ರೇಮಕ್ಕಾಗಿ ಪಾಕಿಸ್ತಾನ ಗಡಿದಾಟಿ ಭಾರತಕ್ಕೆ ಬಂದು ಸುದ್ದಿಯಾಗಿದ್ದ ಸೀಮಾ ಹೈದರ್​ ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪತಿ ಸಚಿನ್ ಸೀಮಾ ಹಲ್ಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿಗಳೂ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

- Advertisement -

ವೀಡಿಯೋದಲ್ಲಿ ಸೀಮಾ ಹೈದರ್ ಊದಿಕೂಂಡಿರುವ ಕಣ್ಣುಗಳನ್ನು, ಒಡೆದಿರುವ ತುಟಿಗಳನ್ನು ತೋರಿಸಿದ್ದು, ಆಕೆಯ ಬಲಬಾಗದ ಕಣ್ಣಿನ ಕೆಳಬಾಗ ಊದಿಕೊಂಡಿದೆ. ರಕ್ತ ಹೆಪ್ಪುಗಟ್ಟಿದ್ದೂ ವೀಡಿಯೋದಲ್ಲಿ ಕಾಣಬಹುದಾಗಿದೆ.

2020 ರಲ್ಲಿ PUBG ಗೇಮ್ ಮೂಲಕ ಗ್ರೇಟರ್ ನೋಯ್ಡಾದ ರಬುಪುರ ಗ್ರಾಮದ ಸಚಿನ್ ಅವರಿಗೆ ಪಾಕಿಸ್ತಾನದ ಸೀಮಾ ಹೈದರ್ ಪರಿಚಸ್ಥರಾಗಿದ್ದರು. ಅಂತಿಮವಾಗಿ ಅದು ಪ್ರೀತಿಗೆ ತಿರುಗಿ ನೇಪಾಳದ ಮೂಲಕ ಭಾರತಕ್ಕೆ ಸೀಮಾ ನಾಲ್ಕು ಮಕ್ಕಳೊಂದಿಗೆ ಬಂದಿದ್ದರು.

- Advertisement -

ಸೀಮಾ ಹೈದರ್ ಹಾಗೂ ಭಾರತದ ಸಚಿನ್ ಮದುವೆಯಾಗಿದ್ದಾರೆ.

ವೈರಲ್ ಆಗಿರುವ ವೀಡಿಯೋ ಅಸಲಿ ಅಲ್ಲ, ಇದು ಡೀಫ್ ಫೇಕ್ ವಿಡಿಯೋ ಎಂದೂ ಹೇಳಲಾಗುತ್ತಿದೆ.

Join Whatsapp