ಕಾಶ್ಮೀರ ಹಿಂಸಾಚಾರ: ನಾಗರಿಕರ ಹತ್ಯೆ ವಿರೋಧಿಸಿ ಬಂದ್ ಗೆ ಕರೆ ನೀಡಿದ ಹುರಿಯತ್ ಕಾನ್ಫರೆನ್ಸ್

Prasthutha|

ಜಮ್ಮು: ಹೈದರ್ ಪುರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಾಗರಿಕರ ಹತ್ಯೆಯನ್ನು ವಿರೋಧಿಸಿ ಹುರಿಯತ್ ಕಾನ್ಫರೆನ್ಸ್ ಕಾಶ್ಮೀರ ಬಂದ್ ಗೆ ಕರೆ ನೀಡಿದೆ.

- Advertisement -

ಮಾತ್ರವಲ್ಲ ಹತ್ಯೆಯಾದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಮತ್ತು ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೈದರ್ ಪುರದಲ್ಲಿ ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ಭಯೋತ್ಪಾದಕರು ಮತ್ತು ಸಹಚರರು ಎಂಬ ಆರೋಪ ಹೊರಿಸಿ ಭದ್ರತಾ ಪಡೆಗಳು ಹತ್ಯೆ ನಡೆಸಿದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಹುರಿಯತ್ ಕಾನ್ಫರೆನ್ಸ್, ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಕ್ರೂರ ನಡೆಯನ್ನು ವಿರೋಧಿಸಿ ಬಂಧ್ ನಡೆಸುತ್ತಿರುವುದಾಗಿ ಘೋಷಿಸಿದರು.

- Advertisement -

ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ಮತ್ತು ಮೃತದೇಹಗಳ ಹಸ್ತಾಂತರಕ್ಕೆ ಒತ್ತಾಯಿಸಿದ ಬುಧವಾರ ಕುಟುಂಬದ ಸದಸ್ಯರು ಮತ್ತು ನಾಗರಿಕರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಮಧ್ಯರಾತ್ರಿ ವೇಳೆ ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸಕ್ತ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಗುರುವಾರ ಹೈದರ್ ಪುರ ಎನ್ ಕೌಂಟರ್ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

Join Whatsapp