ತ್ರಿಪುರಾ ಹಿಂಸಾಚಾರ: ನೂರಾರು ಮುಸ್ಲಿಮ್ ಯುವಕರ ಮೇಲೆ ಯುಎಪಿಎ ಪ್ರಕರಣ ದಾಖಲಿಸಿದ ಬಿಜೆಪಿ ಸರ್ಕಾರ !

Prasthutha|

ಅಗರ್ತಲಾ: ತ್ರಿಪುರಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿಯೆತ್ತಿದ ನೂರಾರು ಯುವಕರ ಮೇಲೆ ಯುಎಪಿಎ, ಐಪಿಸಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ಸಂಘಪರಿವಾರ ನಡೆಸಿದ ದುಷ್ಕೃತ್ಯವನ್ನು ಸಂವಿದಾನಬದ್ಧವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟಿಸಿದ ಯುವಕರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತ್ರಿಪುರಾ ಪೊಲೀಸ್ ಇಲಾಖೆ ಮತ್ತು ಸರ್ಕಾರದ ಸಂವಿದಾನ ವಿರೋಧಿ ನಡೆಯನ್ನು ಖಂಡಿಸೋಣ, ಪ್ರತಿರೋಧದ ಮನೋಭಾವವನ್ನು ಮುಂದುವರಿಸೋಣ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಮತ್ತೆ ಟ್ವಿಟ್ಟರ್ ಅಭಿಯಾನ ನಡೆಸಿ, ಆಡಳಿತ ವರ್ಗಕ್ಕೆ ಸಡ್ಡು ಹೊಡೆದಿದೆ.

- Advertisement -

ಮಾತ್ರವಲ್ಲ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಾಲ್ವರು ಮುಸ್ಲಿಮ್ ವಿದ್ವಾಂಸರನ್ನು ಶುಕ್ರವಾರ ತ್ರಿಪುರಾ ಪೋಲಿಸರು ಬಂಧಿಸಿದ್ದರು. ಅದೇ ರೀತಿ 68 ಟ್ವಿಟ್ಟರ್ ಖಾತೆಗಳ ಸ್ಥಗಿತಗೊಳಿಸುವಂತೆ ತ್ರಿಪುರಾ ಪೊಲೀಸರು ಟ್ವಿಟ್ಟರ್ ಕೇಂದ್ರ ಕಚೇರಿಗೆ ಸೂಚಿಸಿದ್ದರು. ಸತ್ಯಶೋಧನಾ ನಡೆಸಿದ ಸುಪ್ರೀಂ ಕೋರ್ಟ್ ನ ವಕೀಲರ ಮೇಲೆ ಯುಎಪಿಎ ಪ್ರಕರಣ ದಾಖಲಿಸಿತ್ತು.

ಒಟ್ಟಿನಲ್ಲಿ ಸಂಘಪರಿವಾರ ನಡೆಸಿದ ತ್ರಿಪುರಾ ಗಲಭೆಯನ್ನು ಮರೆಮಾಚಿ ಅದನ್ನು ವಿರೊಧಿಸಿ ಮಾತನಾಡಿದವರ ಮೇಲೆಯೇ ಬಿಜೆಪಿ ಸರ್ಕಾರ ಕಠಿಣ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸುತ್ತಿದೆ.

ಅನ್ಯಾಯಕ್ಕೊಳಗಾದ ಜನರಿಗೆ ನೆರವಾಗುವ ಸಾಮಾಜಿಕ ಹೋರಾಟಗಾರರ ಮೇಲೆ ಯುಎಪಿಎ ಯಂತಹ ಕರಾಳ ಕಾನೂನು ಹೇರಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡುತ್ತಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Join Whatsapp