ವಲಸಿಗರಿಗೆ ಟಿಕೆಟ್ : ಪಕ್ಷದ ನಿರ್ಧಾರದಿಂದ ಬೇಸತ್ತು ಬೀದಿಗಿಳಿದ ನೂರಾರು ಬಿಜೆಪಿ ಕಾರ್ಯಕರ್ತರು

Prasthutha|

ಪಶ್ವಿಮ ಬಂಗಾಳದಲ್ಲಿ ರಾಜಕೀಯ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಪಕ್ಷವು ಹಲವು ರೀತಿಯ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಬಂಗಾಳದ ದೀದಿ ವಿರುದ್ಧ ತೊಡೆತಟ್ಟಲು ತೃಣಮೂಲ ಕಾಂಗ್ರೆಸಿನಿಂದ ವಲಸೆ ಬಂದ ಹಲವರನ್ನೇ ಮುಂದಿನ ಚುನಾವಣೆಗೆ ಕಣಕ್ಕಿಳಿಸಲು ನಿರ್ಧರಿಸಿದ್ದು ಈ ನಿಲುವನ್ನು ಖಂಡಿಸಿ ನೂರಾರು ಬಿಜೆಪಿ ಬೆಂಬಲಿಗರು ಬೀದಿಗಿಳಿದಿದ್ದಾರೆ.

- Advertisement -

ಬಿಜೆಪಿ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಿಯಾಗಿ ಪಕ್ಷಾಂತರಗೊಂಡು ಬಂದವರನ್ನೇ ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಕೊಲ್ಕಾತ್ತದಲ್ಲಿನ ಪಕ್ಷದ ಚುನಾವಣೆ ಕಛೇರಿ ಎದುರುಗಡೆ ಪ್ರತಿಭಟಿಸಿದ್ದಾರೆ. ಮಾತ್ರವಲ್ಲ ಹಿರಿಯ ಬಿಜೆಪಿ ಮುಖಂಡರುಗಳಾದ ಮುಕುಲ್ ರಾಯ್,ಶಿವ ಪ್ರಕಾಶ್, ಮತ್ತು ಅರ್ಜುನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬೆಳೆಕಿಗೆ ಬಂದಿದೆ. ಕೇಂದ್ರ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ದಾ ಕೊಲ್ಕಾತ್ತದಲ್ಲಿ ಚುನಾವಣಾ ಪ್ರಚಾರಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಅದೇ ದಿನವೇ ನೂರರು ಬಿಜೆಪಿ ಬೆಂಬಲಿಗರು ತಮ್ಮ ಪಕ್ಷದ ನಡೆಯ ವಿರುದ್ಧ ಪ್ರತಿಭಟಿಸಿಸಿದ್ದಾರೆ. ಪ್ರತಿಭಟನಾಕಾರರು ಚುನಾವಣಾ ಕಛೇರಿಯ ಹೊರಗಡೆ ಇರುವ ಬ್ಯಾರಿಕೇಡ್ ಗಳನ್ನು ಮುರಿದು ಕಛೇರಿಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಬೆಂಬಲಿಗರು ಮತ್ತು ಮುಖಂಡರ ನಡುವೆ ನಡೆದ ಜಟಾಪಟಿಯ ವೀಡಿಯೋ ಹರಿದಾಡುತ್ತಿದ್ದು, ಉದ್ವಿಘ್ನ ಪರಿಸ್ಥಿಯನ್ನು ನಿಭಾಯಿಸಲು ದೊಡ್ಡ ಸಂಖ್ಯೆಯಲ್ಲಿ ಪೋಲಿಸರನ್ನು ನೇಮಿಸಲಾಗಿದೆ.



Join Whatsapp