ಚಿತ್ರದುರ್ಗ| ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ ನೂರಕ್ಕೂ ಅಧಿಕ ಮಂದಿ

Prasthutha|

ಚಿತ್ರದುರ್ಗ: ಹಿಂದೂ ಧರ್ಮದ ನೂರಕ್ಕೂ ಅಧಿಕ ಮಂದಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ. ಭಾನುವಾರ ಮಹಾಬೋಧಿ ಸಂಸ್ಥೆಯ ಸಾರಥ್ಯದಲ್ಲಿ ನಡೆದ ದೀಕ್ಷೆಯಲ್ಲಿ ಹಿಂದೂ ಧರ್ಮದ 103 ಜನರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.

- Advertisement -

ಬುದ್ಧನ ಮಾರ್ಗದಲ್ಲಿ ನಡೆದು ಉಪಾಸಕ ಹಾಗೂ ಉಪಾಸಕಿಯರಾಗಿ ನಾವು ಸಾಗುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಬೆಂಗಳೂರಿನ ಮಹಾಭೋಧಿ ಸಂಸ್ಥೆಯ ಆನಂದ ಬಂತೇಜ ಅವರು ಹಿಂದೂ ಧರ್ಮ ತ್ಯಜಿಸಿದವರಿಗೆ ಬೌದ್ಧ ಧರ್ಮ ದೀಕ್ಷೆಯನ್ನು ವಿತರಿಸಿದರು. ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಸ್ವೀಕಾರ ಕಾರ್ಯಕ್ರಮ ನಡೆಯಿತು.

Join Whatsapp