ಅದೃಷ್ಟಕ್ಕಾಗಿ ಜನ್ಮ ದಿನಾಂಕ ಬದಲಾಯಿಸಿದ ಕಾಂಬೋಡಿಯಾ ಪ್ರಧಾನಿ ಹುನ್ ಸೇನ್

Prasthutha|

ಕಾಂಬೋಡಿಯಾ: ಅದೃಷ್ಟ  ಒಲಿದು ಬರಬೇಕೆಂದು ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡಿದ್ದಾರೆ. ಪ್ರಧಾನಿ ಹುನ್ ಸೇನ್ ರ ಅಧಿಕೃತ ಜನ್ಮ ದಿನಾಂಕ ಏಪ್ರಿಲ್ 4, 1951 ನ್ನು ಆಗಸ್ಟ್ 5, 1952  ಎಂದು ಬದಲಾಯಿಸಲಾಗಿದೆ. ನಿಜವಾದ ಜನ್ಮದಿನವು ಹೊಸ ದಿನಾಂಕದಲ್ಲಿದೆ ಎಂದು ಹನ್ ಸೇನ್ ಘೋಷಿಸಿದರು.

- Advertisement -

ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಮರಳಿದ 10 ದಿನಗಳ ನಂತರ  ಹುನ್ ಸೇನ್  ಅವರ ಅಣ್ಣ ನಿಧನರಾಗಿದ್ದರು. ಚೀನಾದ ರಾಶಿಚಕ್ರದ ಕ್ಯಾಲೆಂಡರ್‌ಗೆ ವಿರುದ್ಧವಾದ ಜನ್ಮದಿನಾಂಕದಿಂದ ಅವರ ಸಹೋದರನ ಹಠಾತ್ ಸಾವು ಸಂಭವಿಸಿದೆ ಎಂಬ ಶಂಕೆಯಿಂದ ಪ್ರಧಾನಿಯವರ ಜನ್ಮ ದಿನಾಂಕವನ್ನು ಬದಲಾಯಿಸಲಾಗಿದೆ. ಇದು ದುರದೃಷ್ಟವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಕಾಂಬೋಡಿಯನ್ನರು ಎರಡು ಜನ್ಮ ದಿನಾಂಕಗಳನ್ನು ಹೊಂದಿರುವುದು ಅಸಾಮಾನ್ಯವೇನಲ್ಲ. 1975 ರಿಂದ 1979 ರವರೆಗೆ ಖಮರ್ ರೂಷ್ ರ  ಆಡಳಿತಾವಧಿಯಲ್ಲಿ ಅಧಿಕೃತ ದಾಖಲೆಗಳ ನಷ್ಟದಿಂದ ಅವಳಿ ಜನನ ದಿನಾಂಕಗಳ ಸೃಷ್ಟಿಯಾದವು.



Join Whatsapp