RSS ವಿಭಜನಾ ನೀತಿಯ ವಿರುದ್ಧ ತಮಿಳುನಾಡಿನಲ್ಲಿ ಮಾನವ ಸರಪಳಿ

Prasthutha|

ಚೆನ್ನೈ: ಆರ್ ಎಸ್ಎಸ್ ನ ವಿಭಜನಕಾರಿ ರಾಜಕೀಯ ಕಾರ್ಯಸೂಚಿಯ ವಿರುದ್ಧ ವಿವಿಧ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳಿಗೆ ಸೇರಿದ ನೂರಾರು ಜನರು ಚೆನ್ನೈನಲ್ಲಿ ಕೋಮು ಸೌಹಾರ್ದತೆ  ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

- Advertisement -

ಪ್ರತಿಭಟನೆಯ ನೇತೃತ್ವವನ್ನು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ಥೋಲ್ ತಿರುಮಾವಲವನ್ ವಹಿಸಿದ್ದರು.

ಸರಪಳಿಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು, ಸಂಘ ಪರಿವಾರದ ರಾಜಕೀಯ ಮತ್ತು ಅವರ ಕಾರ್ಯಸೂಚಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

- Advertisement -

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಸಿಕೆ ಮುಖ್ಯಸ್ಥ ಥೋಲ್ ತಿರುಮಾವಲವನ್, ತಮಿಳುನಾಡಿನಲ್ಲಿ ಆರ್ ಎಸ್ಎಸ್ ಯಾವುದೇ ಸ್ಥಾನವಿಲ್ಲ. ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜಕೀಯ ಮುಖವನ್ನು ಹೊಂದಿದೆ, ಅದಕ್ಕೆ ಅವಕಾಶ ನೀಡಬಹುದು. ಆದರೆ ಆರ್ ಎಸ್ಎಸ್ ಮುಖರಹಿತ ಸಂಘಟನೆಯಾಗಿದ್ದು, ಇದು ಮಹಾತ್ಮಾ ಗಾಂಧಿ ಹತ್ಯೆ, ಗುಜರಾತ್ ದಂಗೆಗಳು ಮತ್ತು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.

ತಮಿಳುನಾಡು ಕಾಂಗ್ರೆಸ್, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) (ಸಿಪಿಐಎಂ), ಮಣಿತಾನೇಯ ಮಕ್ಕಳ್ ಕಚ್ಚಿ (ಎಂಎಂಕೆ) ಮತ್ತು ತಮಿಳಾಗ ವಾಜ್ವುರಿಮೈ ಕಚ್ಚಿ (ಟಿವಿಕೆ) ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ.

ದ್ರಾವಿಡರ್ ಕಳಗಂ (ಡಿಕೆ) ಥಂತೈ ಪೆರಿಯಾರ್ ದ್ರಾವಿಡರ್ ಕಳಗಂನಂತಹ ರಾಜಕೀಯೇತರ ಸಂಘಟನೆಗಳು ಮಾನವ ಸರಪಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.



Join Whatsapp