ಹಳಿ ಮೇಲೆ ಬಿದ್ದ ಬೃಹತ್ ಮರ: ಪ್ರಯಾಣಿಕರಿಲ್ಲದ ರೈಲು ಅಪಘಾತ

Prasthutha|

ಕಾಂಕೇರ್: ಹಳಿ ಮೇಲೆ ಮರ ಬಿದ್ದಿದ್ದರಿಂದ ಪ್ರಯಾಣಿಕರಿಲ್ಲದೇ ಸಂಚರಿಸುತ್ತಿದ್ದ ರೈಲೊಂದು ಹಳಿ ತಪ್ಪಿರುವ ಘಟನೆ ಛತ್ತೀಸಗಢದ ಕಾಂಕೇರ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

- Advertisement -


ಘಟನೆಯಲ್ಲಿ ಲೊಕೊ ಪೈಲಟ್ ಗಾಯಗೊಂಡಿದ್ದು ಅವರನ್ನು ಕಾಂಕೇರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಶುಕ್ರವಾರ ಬೆಳಿಗ್ಗೆ ಭಾನುಪ್ರತಾಪಪುರ–ಗುದ್ದಾಂ ನಡುವೆ ಸಂಚರಿಸುತ್ತಿದ್ದ ಪ್ರಯಾಣಿಕರಿಲ್ಲದ ಡೆಮು ರೈಲು ದಲಿರಂಜಹಾರ್ ಬಳಿ ಅಪಘಾತಕ್ಕೆ ಈಡಾಗಿದೆ.

- Advertisement -


ಮಳೆ ಇದ್ದಿದ್ದರಿಂದ ಲೊಕೊ ಪೈಲಟ್ ಮರ ಬಿದ್ದಿದ್ದನ್ನು ಗಮನಿಸಿರಲಿಲ್ಲ. ಹೀಗಾಗಿ ಹಳಿ ತಪ್ಪಿದೆ ಎಂದು ತಿಳಿಸಿದ್ದಾರೆ.



Join Whatsapp