ಸುಯೆಝ್ ಕಾಲುವೆ ಮಧ್ಯದಲ್ಲಿ ಬಾಕಿಯಾದ ಸರಕು ಹಡಗು । ಮತ್ತೊಂದು ಟೈಟಾನಿಕ್ ಎನಿಸಿಕೊಳ್ಳಲಿದೆಯೇ ಇದು?

Prasthutha|

►ಹಡಗಿನಲ್ಲಿರುವ ಸಿಬ್ಬಂದಿಗಳೆಲ್ಲರೂ ಭಾರತೀಯರು !

- Advertisement -

ಈಜಿಪ್ಟ್ : ಕೈರೋ ಸುಯೆಝ್ ಕಾಲುವೆಯಲ್ಲಿ ಬೃಹತ್ ಹಡಗೊಂದು ನಿಷ್ಕ್ರಿಯಗೊಂಡ ಪರಿಣಾಮ ಕಳೆದೊಂದು ವಾರದಿಂದ ಈ ಕಾಲುವೆ ಮೂಲಕದ ಜಲಸಂಚಾರವೇ ಸ್ಥಗಿತಗೊಂಡ ಘಟನೆ ನಡೆದಿದೆ.   ಇದು ಯುರೋಪ್ ರಾಷ್ಟ್ರದ ಸರಕು ಸಾಗಾಟದಲ್ಲಿ ಭಾರೀ ವ್ಯತ್ಯಯ ಉಂಟು ಮಾಡಿದ್ದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. 2,24,000 ಟನ್ ತೂಕದ ಸರಕು ಹೊಂದಿದ   ಬೃಹತ್ ಹಡಗು ಮಾರ್ಚ್ 23ರಂದು ಭಾರೀ ಗಾಳಿಗೆ ಸಿಲುಕಿ  ಆಯ ಕಳೆದುಕೊಂಡಿತ್ತು. ಸುಯೆಝ್ ಕಾಲುವೆಯು ಪ್ರಮುಖ ಜಲಸಂಚಾರ ಮಾರ್ಗವಾಗಿದ್ದು, ಪ್ರತಿನಿತ್ಯ 160 ಹಡಗುಗಳು ಈ ಮಾರ್ಗವಾಗಿ ಸಂಚರಿಸುತ್ತಿವೆ. ದಿನಕ್ಕೆ10 ಬಿಲಿಯನ್ ಡಾಲರ್ ವಹಿವಾಟಿನ ಸರಕು ಸಾಗಾಟ ಸುಯೆಝ್ ಕಾಲುವೆ ಮೂಲಕ ನಡೆಯುತ್ತದೆ.

ಜಲಸಂಚಾರಕ್ಕೆ ತಡೆಯಾಗಿರುವ ಬೃಹತ್ ಹಡಗನ್ನು ತೆರವುಗೊಳಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುತ್ತಿದೆ. ದಿನಕ್ಕೆ 2,000 ಕ್ಯುಬಿಕ್ ಮೀಟರ್ ನಷ್ಟು ಸರಕನ್ನು ಖಾಲಿಗೊಳಿಸಲಾಗುತ್ತಿದೆ. ಆದಾಗ್ಯೂ ಹಡಗಿನಲ್ಲಿ ಭಾರೀ ಗಾತ್ರದ ಸರಕನ್ನು ಹೊಂದಿರುವುದರಿಂದ ತೆರವು ಕಾರ್ಯಾಚರಣೆಗೆ ಹೆಚ್ಚಿನ ಸಮಯಾವಕಾಶ ತಗಲಲಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

“ಮೊದಲು ನಾವು ಹಡಗಿನಲ್ಲಿರುವ ಇಂಧನ ತೈಲ ಮತ್ತು ತ್ಯಾಜ್ಯ ನೀರನ್ನು ಹೊರತೆಗೆಯುತ್ತಿದ್ದೇವೆ. ಒಂದೆರಡು ದಿನಗಳಲ್ಲಿ ಇದು ಮುಗಿಯುವ ಪ್ರಕ್ರಿಯೆ ಅಲ್ಲ. ವಾರಗಳೇ ಬೇಕಾಗಬಹುದು” ಎಂದು ತೆರವು ಕಾರ್ಯಾಚರಣೆ ನಡೆಸುತ್ತಿರುವ ಬೋಸ್ಕಾಲಿಸ್ ಕಂಪೆನಿಯ ಸಿಇಒ ಪೀಟರ್ ಬೆರ್ಡೌಸ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಶೇಷವೆಂದರೆ ಹಡಗಿನಲ್ಲಿ ಇದ್ದ ಎಲ್ಲ 25 ಕ್ರೀವ್ಸ್ ಸಿಬ್ಬಂದಿಗಳು ಭಾರತೀಯರಾಗಿದ್ದಾರೆ.



Join Whatsapp