ಹಾರಂಗಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

Prasthutha|

ಮಡಿಕೇರಿ: ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಸುರಕ್ಷಿತವಾಗಿ ಅತ್ತೂರು ಅರಣ್ಯಕ್ಕೆ ಬಿಡಲಾಗಿದೆ.

- Advertisement -

ಅಣೆಕಟ್ಟೆಯ ಮೇಲೆ ಬೃಹತ್ ಗಾತ್ರದ ಹೆಬ್ಬಾವು ಇರುವುದನ್ನು ಗಮನಿಸಿದ ಕರ್ನಾಟಕ ಕೈಗಾರಿಕಾ ರಕ್ಷಣಾ ಪಡೆ(ಕೆ.ಎಸ್.ಐ.ಎಸ್.ಎಫ್)ಯ ಸಿಬ್ಬಂದಿ, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖಾಧಿಕಾರಿ ಅನಿಲ್ ಡಿಸೋಜಾ ಅವರು, ಸ್ನೇಕ್ ಪ್ರವೀಣ್ ಹಾಗೂ ಸ್ನೇಕ್ ಉದಯ್ ಅವರ ಸಹಾಯದಿಂದ ಸುಮಾರು 15ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅತ್ತೂರು ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.



Join Whatsapp