ಚಾಮರಾಜನಗರ: ರಥೋತ್ಸವ ವೇಳೆ ತೇರು (ರಥ) ಪಲ್ಟಿಯಾದ ಘಟನೆ ತಾಲ್ಲೂಕಿನ ಅಮಚವಾಡಿ-ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದಿದೆ.
ಅದೃಷ್ಟವಶಾತ್ ಸಾವು- ನೋವು ಸಂಭವಿಸಿಲ್ಲ.
ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡು ವರ್ಷಗಳ ಬಳಿಕ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಆವರಣದಲ್ಲಿ ಒಂದು ಸುತ್ತು ರಥ ಎಳೆಯಬೇಕಿತ್ತು. ರಥ ಅರ್ಧದವರೆಗೆ ತಲುಪಿದಾಗ ಅದರ ಚಕ್ರದ ಪಟ್ಟಿ (ದೂರಿ) ತುಂಡಾಯಿತು. ಈ ಸಂದರ್ಭದಲ್ಲಿ ರಥ ನಿಧಾನವಾಗಿ ಕೆಳಕ್ಕೆ ವಾಲಿತು. ಈ ಸಂದರ್ಭದಲ್ಲಿ ಅರ್ಚಕರು ಸೇರಿ ನಾಲ್ವರು ಸಿಕ್ಕಿಹಾಕಿಕೊಂಡಿದ್ದರು.