ನರೇಂದ್ರ ಮೋದಿ ಗೆಲುವಿನ ಅಂತರದಲ್ಲಿ ಭಾರೀ ಕುಸಿತ

Prasthutha|

ವಾರಣಾಸಿ: ಈ ಸಲದ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟ ಪ್ರಬಲ ಪೈಪೋಟಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ‌. ಮೋದಿ ಹೆಸರಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿ 240 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 2019 ಮತ್ತು 2014ರಲ್ಲಿ ಕ್ರಮವಾಗಿ 303 ಮತ್ತು 282 ಸ್ಥಾನಗಳನ್ನು ಗೆದ್ದಿತ್ತು. ಈ ಸಲ ಬಿಜೆಪಿಗೆ ಸರ್ಕಾರ ರಚನೆಗೆ ಪಕ್ಷದ ನೇತೃತ್ವದ ಎನ್ಡಿಎಯಲ್ಲಿನ ಮಿತ್ರಪಕ್ಷಗಳ ಬೆಂಬಲದ ಅಗತ್ಯವಿದೆ. ಅಲ್ಲದೆ, ಈ ಸಲ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಕ್ಕೆ 300ರ ಗಡಿಯನ್ನು ದಾಟಲಾಗಿಲ್ಲ.

- Advertisement -

ವಾರಣಾಸಿಯಲ್ಲಿ ಸ್ಪರ್ಧಿಸಿದ ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿದೆ. ಆದರೆ ಈ ಬಾರಿ ಮೋದಿ ಗೆಲುವಿನ ಅಂತರ ಭಾರಿ ಕುಸಿತಗೊಂಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬರೋಬ್ಬರಿ 4.89 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈ ಗೆಲುವಿಗೆ ಹೋಲಿಸಿದರೆ ಅವರ ಗೆಲುವಿನ ಅಂತರದಲ್ಲಿ ಭಾರಿ ಕುಸಿತವಾಗಿದೆ.ಈ ಬಾರಿ ಮೋದಿ ಗೆಲುವಿನ ಅಂತರ 1.5 ಲಕ್ಷ ಮತಗಳು ಮಾತ್ರ.

2019ರ ಚುನಾವಣೆಗೆ ಹೋಲಿಸಿದರೆ ಮೋದಿ ಮತ ಗಳಿಕೆಯಲ್ಲೂ ಕುಸಿತ ಕಂಡಿದ್ದಾರೆ. 2019ರಲ್ಲಿ ಮೋದಿ 6,74, 664 ಮತಗಳನ್ನು ಪಡೆದಿದ್ದರು. ಈ ಬಾರಿ ಮತದಾರರು ಹೆಚ್ಚಿದ್ದರೂ ಮೋದಿ 6,12,970 ಮತಗಳನ್ನು ಅಷ್ಟೇ ಪಡೆದಿದ್ದಾರೆ.ಈ ಮೂಲಕ ಮೋದಿ ಅವರ ಜನಪ್ರಿಯತೆ ಕುಗ್ಗಿರುವುದು ಸಾಬೀತಾಗಿದೆ.

- Advertisement -

ರಾಹುಲ್ ಗಾಂಧಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಕ್ಕೆ ಬರುವುದಾದರೆ, ಎರಡನೇ ಬಾರಿಯೂ ಅವರು ವಯನಾಡ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, 3.64 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ, ತಾಯಿ ಸೋನಿಯಾ ಗಾಂಧಿ ಅವರು ಬಿಟ್ಟುಕೊಟ್ಟಿದ್ದ ರಾಯ್‌ಬರೇಲಿ ಕ್ಷೇತ್ರದಿಂದಲೂ ಈ ಬಾರಿ ಸ್ಪರ್ಧಿಸಿದ್ದ ರಾಹುಲ್, ಸೋನಿಯಾ ಗಾಂಧಿಗೂ ಉತ್ತಮ ಸಾಧನೆ ಮಾಡಿದ್ದಾರೆ. ರಾಹುಲ್ ಗಾಂಧಿ ಅಲ್ಲಿ 3.90 ಲಕ್ಷಕ್ಕೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.



Join Whatsapp