ಬಜರಂಗದಳ ಕಾರ್ಯಕರ್ತರಿಂದ ಹತ್ಯೆಯಾದ ಮಸೂದ್ ಅಂತ್ಯ ಸಂಸ್ಕಾರದಲ್ಲಿ ಬೃಹತ್ ಜನಸ್ತೋಮ

Prasthutha|

ಸುಳ್ಯ: ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಬೆಳ್ಳಾರೆಯ ಕಳಂಜ ನಿವಾಸಿ ಮುಹಮ್ಮದ್ ಮಸೂದ್ ಗುರುವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ನಿನ್ನೆ ರಾತ್ರಿ 2 ಗಂಟೆಗೆ ಬೆಳ್ಳಾರೆ ಝಕರಿಯ ಜುಮಾ ಮಸೀದಿ ಕಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.

- Advertisement -

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ರಾತ್ರಿ 11:30ಕ್ಕೆ ಪೋಸ್ಟ್ ಮಾರ್ಟಂ ಆದ ಬಳಿಕ ಮಂಗಳೂರಿನಲ್ಲಿ ಜನಾಝ ಸ್ನಾನ ಮುಗಿಸಿ, ಬೆಳ್ಳಾರೆಗೆ ಆಂಬುಲೆನ್ಸ್ ಮೂಲಕ ಮೃತ ದೇಹವನ್ನು ತರಲಾಯಿತು.

ಮೃತದೇಹ ಬೆಳ್ಳಾರೆಗೆ ತರುವ ವಿಷಯ ತಿಳಿದು ಮಸೀದಿ ಪರಿಸರದಲ್ಲಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದ್ದರು.

- Advertisement -

ಬಳಿಕ ಮೃತ ದೇಹವನ್ನು ಮಸೂದ್ ನ ಮನೆಗೆ ಕೊಂಡೊಯ್ದು ಅಲ್ಲಿ ಕುಟುಂಬಸ್ಥರ ಸಂದರ್ಶನದ ಬಳಿಕ ಝಕರಿಯ ಮಸೀದಿ ಕಬರ್ ಸ್ಥಾನಕ್ಕೆ ತಂದು ದಫನ ಕಾರ್ಯ ನೆರವೇರಿಸಲಾಯಿತು.

ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ, ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.

ಪ್ರಕರಣ ಸಂಬಂಧ 8 ಮಂದಿ ಬಜರಂಗದಳದ ಕಾರ್ಯಕರ್ತರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಬಜರಂಗ ದಳದ ಕಾರ್ಯಕರ್ತರಾದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ್ ಬಂಧಿತರಾಗಿದ್ದಾರೆ.



Join Whatsapp