ಅನಿವಾಸಿ ಕನ್ನಡಿಗರ ಒಕ್ಕೂಟ UAE ವತಿಯಿಂದ ಬೃಹತ್ ರಕ್ತದಾನ ಶಿಬಿರ

Prasthutha|

ದುಬೈ : ಹಲವಾರು ವರ್ಷಗಳಿಂದ ಯು.ಎ.ಇ ಯಾದ್ಯಂತ ಸಾಮಾಜಿಕ ರಂಗದಲ್ಲಿ ಸೇವೆಗೈಯುತ್ತಿರುವ ಅನಿವಾಸಿ ಕನ್ನಡಿಗರ ಒಕ್ಕೂಟ UAE ಇದರ ವತಿಯಿಂದ ಲತೀಫಾ ಆಸ್ಪತ್ರೆ ದುಬೈಯಲ್ಲಿ, ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ  ನೇತೃತ್ವ ವಹಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ. ಇದರ ಶಾಫಿ ಬಜ್ಪೆ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪ್ರತಿಯೊಬ್ಬ ರಕ್ತದಾನಿ ಇನ್ನೊಬ್ಬರ ಜೀವ ರಕ್ಷಕರಾಗಿರುತ್ತಾರೆ. ಪ್ರತಿಯೊಬ್ಬರೂ ರಕ್ತದಾನ ನೀಡುವ  ಮೂಲಕ ಮಾನವೀಯತೆಯ ಮನೋಭಾವನೆಗಳನ್ನು ಬೆಳೆಸಬೇಕು ಎಂದರು.

- Advertisement -

ಈ ಶಿಬಿರದಲ್ಲಿ ಒಟ್ಟು 105 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಈ ರಕ್ತದಾನ ಶಿಬಿರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಲತೀಫಾ ಆಸ್ಪತ್ರೆಯ ಆಡಳಿತ ಮಂಡಳಿಯವರು ಅನಿವಾಸಿ ಕನ್ನಡಿಗರ ಒಕ್ಕೂಟ ಇದರ ಕಾರ್ಯ ವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ ಎಲ್ಲರಿಗೂ ಅನಿವಾಸಿ ಕನ್ನಡಿಗರ ಒಕ್ಕೂಟ UAE ಇದರ ಅಧ್ಯಕ್ಷರಾಗಿರುವ ಜನಾಬ್ ಶಂಸುದ್ದೀನ್ ಉಡುಪಿಯವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.

- Advertisement -