ಹುಬ್ಬಳ್ಳಿ ಗಲಭೆ: ಬಂಧಿತರ ಸಂಖ್ಯೆ 104ಕ್ಕೇರಿಕೆ, ಆರೋಪಿಗಳು ಕಲಬುರಗಿಗೆ ಶಿಫ್ಟ್

Prasthutha|

ಹುಬ್ಬಳ್ಳಿ: ಪ್ರಚೋದನಾಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ 104 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

- Advertisement -

ಗಲಭೆ ಸಂಬಂಧ ನಿನ್ನೆ ರಾತ್ರಿಯವರೆಗೆ 89 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಇಂದು ಮತ್ತೆ 15 ಮಂದಿ ಬಂಧಿಸಿ  ಒಟ್ಟು 12 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಗಲಾಟೆ ಪ್ರಕರಣದ ಸಂಬಂಧ ಒಟ್ಟಾರೆ  104 ಮಂದಿ ಬಂಧಿಸಲಾಗಿದೆ. ದೇವಸ್ಥಾನ, ಮನೆ ಹಾಗೂ ಪೋಸ್ಟ್ ಆಫೀಸ್ ಮೇಲೆ ಕಲ್ಲು ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ ದೂರು ದಾಖಲಿಸಲಾಗಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಮುಂದುವರೆಸಿದ್ದು, ಬೇರೆ ಕಡೆ ಎಲ್ಲೂ ಗಲಾಟೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತನಿಖೆ ನಂತರ ಎಲ್ಲಾ ಸತ್ಯಾಸತ್ಯತೆ ಗೊತ್ತಾಗಲಿದ್ದು, ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ದರೂ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ಕಡೆ ಎಲ್ಲೂ ಗಲಾಟೆ ಆಗದಂತೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಪೊಲೀಸ್ ವಾಹನದ ಮೇಲೆ ಮೌಲ್ವಿ ಸೇರಿದಂತೆ ಹಲವರು ಹತ್ತಿದ್ದ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಆರಂಭವಾಗಿದೆ. ತನಿಖೆ ನಂತರ ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ದರು ಎಂಬುದರ ಬಗ್ಗೆ ಗೊತ್ತಾಗಲಿದೆ.

ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಗುಪ್ತಚರ ಮಾಹಿತಿಯಿಂದ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿದೆ. ಬಂಧಿತರ ಬಿಡುಗಡೆಗೆ ಆಗ್ರಹಿಸಿ ಮತ್ತೊಂದು ಹೋರಾಟಕ್ಕೆ ಕೆಲವು ಸಂಘಟನೆಗಳು ಮುಂದಾಗಿರುವ ಮಾಹಿತಿ ಇದೆ. ಹೀಗಾಗಿ ಏಕಾಏಕಿ ಆರೋಪಿಗಳನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಬಂಧಿತ ಗಲಭೆಕೋರರನ್ನು ಕಲಬುರಗಿಯ ಕೇಂದ್ರಿಯ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ನವಲಗುಂದ ಮಾರ್ಗವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನು ಬೇರೆಕಡೆ ರವಾನಿಸಲಾಯಿತು.ಸುಮಾರು 88 ಜನರನ್ನು ಜೈಲಿಗೆ ಕಳುಹಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಆರೋಪಿಗಳನ್ನು ಸ್ಥಳಾಂತರಿಸಲಾಗಿದ್ದು, ಬಂಧಿತರೆಲ್ಲರಿಗೂ ಹುಬ್ಬಳ್ಳಿಯ 4ನೇ ಜೆಎಮ್ಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ಆದೇಶ ನೀಡಿದೆ. ಇಂದು ಪೊಲೀಸರು ಮತ್ತೆ 14 ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಲಿದ್ದು ಪರಾರಿಯಾಗಿರುವವರ ಬಂಧನಕ್ಕೆ ಪೊಲೀಸರು ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.



Join Whatsapp