ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನ ಬಿಜೆಪಿ ಪಾಲಾಗಿದೆ.
ಇಂದು ನಡೆದ ಚುನಾವಣೆಯಲ್ಲಿ 46 ಮತಗಳನ್ನು ಪಡೆಯುವ ಮೂಲಕ ಮೇಯರ್ ಆಗಿ ಬಿಜೆಪಿಯ ವೀಣಾ ಬಾರದ್ವಾಡ್ ಆಯ್ಕೆಯಾಗಿದ್ದರೆ, ಬಿಜೆಪಿಯ ಸತೀಶ್ ಹಾನಗಲ್ ಸಹ 46 ಮತಗಳನ್ನು ಪಡೆಯುವ ಮೂಲಕ ಉಪ ಮೇಯರ್ ಆಗಿ ಆಯ್ಕೆಯಾದರು. ಇನ್ನು ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಸುವರ್ಣ ಸ್ಪರ್ಧಿಸಿದ್ದು ಅವರ ಪರ 37 ಮತಗಳು ಮಾತ್ರ ಚಲಾವಣೆಗೊಂಡಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು ಸದಸ್ಯರ ಬಲ 82 ಆಗಿದ್ದು ಅಧಿಕಾರ ಹಿಡಿಯಲು 46 ಮತಗಳು ಬೇಕಿತ್ತು. ಬಿಜೆಪಿ ಕಾರ್ಪೊರೇಟರ್ಗಳ ಸಂಖ್ಯೆ 39 ಇದ್ದು, ಕಾಂಗ್ರೆಸ್ 33, ಪಕ್ಷೇತರ 6, AIMIM 3, ಜೆಡಿಎಸ್ 1 ಸ್ಥಾನ ಹೊಂದಿತ್ತು.