ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಹುಬ್ಬಳ್ಳಿ ಬಿಜೆಪಿ ಪ್ರಚಾರಕ ಸಹಿತ ಮೂವರ ಬಂಧನ

Prasthutha|

ಹುಬ್ಬಳ್ಳಿ: ಹಾಲು ಮಾರುವವರ ಸೋಗಿನಲ್ಲಿದ್ದು ಖೋಟಾ ನೋಟು ಚಲಾವಣೆ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಬಿಜೆಪಿ ಮುಖಂಡ ಸಾಗರ್ ಕಾಶಪ್ಪನವರ್ ಮತ್ತು ಇತರ ಒಬ್ಬರು ಬಂಧಿತರು. ಬಂಧಿತರಿಂದ 500 ರೂ. ಮುಖಬೆಲೆಯ 47 ಖೋಟಾ ನೋಟು ಮತ್ತು ಕಲರ್ ಜೆರಾಕ್ಸ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ಠಾಣೆ ಪೊಲೀಸರು ಈ ಕಾರ್ಯಾಚರಣೆ ಮಾಡಿದ್ದಾರೆ.

- Advertisement -

ಸಾಗರ ಕಾಶಪ್ಪನವರ ಧಾರವಾಡ ಬಿಜೆಪಿ ಗ್ರಾಮಾಂತರ ಜಿಲ್ಲೆಯ ಸಾಮಾಜಿಕ ಜಾಲತಾಣದ ಸದಸ್ಯನಾಗಿದ್ದಾನೆ. ಈತ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರಕಿತ್ತು. ಅದರಂತೆ, ಕುಂದಗೋಳ ಸಿಪಿಐ ಮಾರುತಿ ಗುಳಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕುಂದಗೋಳದಲ್ಲಿ ಹಾಲಿನ ಅಂಗಡಿ ಇಟ್ಟುಕೊಂಡಿರುವ ಸಾಗರ್ ಕಾಶಪ್ಪನವರ್, ಹಾಲಿನ ವ್ಯಾಪಾರದ ಜೊತೆಗೆ ಬೇರೆ ಕಡೆಯಿಂದ ಖೋಟಾ ನೋಟು ತಂದು ಕುಂದಗೋಳ ಸುತ್ತಮುತ್ತ ಚಲಾವಣೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆತನ ಹಾಲಿನ ಅಂಗಡಿ ಕುಂದಗೋಳ ಪಟ್ಟಣದ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿದ್ದು ಖೋಟಾ ನೋಟನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾಗಲೇ ಬಂಧಿಸಲ್ಪಟ್ಟಿದ್ದಾನೆ. ಆತನೊಂದಿಗೆ ಬೇರೆ ಇಬ್ಬರನ್ನು ಬಂಧಿಸಲಾಗಿದೆ.

Join Whatsapp